ದಾವಣಗೆರೆ ಡಿ.09
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ
ಇವರು ಡಿ.10 ರಂದು ದಾವಣಗೆರೆ ಜಿಲ್ಲೆಯ ಪ್ರವಾಸ
ಕೈಗೊಳ್ಳಲಿದ್ದಾರೆ.
ಸಚಿವರು ಡಿ.10 ರಂದು ಸಂಜೆ 6 ಗಂಟೆಗೆ ದಾವಣಗೆರೆಗೆ
ಆಗಮಿಸುವರು. ನಂತರ 6.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ
ಕಚೇರಿಯಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳೊಂದಿಗೆ
ಪ್ರಮುಖ ವಿಷಯಗಳ ಬಗ್ಗೆ ಸಭೆ ನಡೆಸುವರು. ಸಂಜೆ 7
ಗಂಟೆಗೆ ತ್ರಿಶೂಲ್ ಕಲಾ ಭವನದಲ್ಲಿ ಮುಖ್ಯಮಂತ್ರಿಗಳ
ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಇವರ
ಕುಟುಂಬದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ರಾತ್ರಿ 7.30ಕ್ಕೆ ಹಿರಿಯೂರಿಗೆ
ತೆರಳುವರೆಂದು ಪ್ರಕಟಣೆ ತಿಳಿಸಿದೆ.