ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.10 ದಿಡಗೂರು ಗ್ರಾಮದ ವಾಸಿಯಾದ ಕುರುವದರ್ ಮನೆಯ ಶ್ರೀಮತಿ ಶಾರದ/ನಾಗರಾಜ್ ದಂಪತಿಗೆ ಹುಟ್ಟಿದ ಮಗಳಾದ ಸಹನಾ, ಶ್ರೀಮತಿ ಸಾಕಮ್ಮ/ಬಸವರಾಜ್ ದಂಪತಿಗೆ ಹುಟ್ಟಿದ ಮಗಳಾದ ಪೂಜಾ ,ಈ ಎರಡು ಹೆಣ್ಣು ಮಕ್ಕಳು ಎಸ್.ಎಸ್.ಎಲ್.ಸಿ ಪಾಸ್ ಆದ ನಂತರ 2017-18ನೇ ಸಾಲಿನಲ್ಲಿ ಶಿರಾಳಕೊಪ್ಪದ ತಡಗಣಿ ಗ್ರಾಮದಲ್ಲಿ ಇರುವ ಸರ್ಕಾರಿ ಮಹಿಳಾ ಪಾಲಿಟೆಕ್ನ್ ಕಾಲೇಜಿಗೆ ಸೇರಿ ಇ&ಸಿಇ ಡಿಪ್ಲೊಮೊ ತರಗತಿಯನ್ನು 3 ವರ್ಷಗಳ ಕಾಲ ಓದಿ ಅತಿ ಹೆಚ್ಚು ಅಂಕವನ್ನು ಪಡೆದು ಆ ಎರಡು ವಿದ್ಯಾರ್ಥಿನಿಯರು ಕಾಲೇಜಿಗೆ ಮತ್ತು ಅವರ ತಂದೆ, ತಾಯಿಯರಿಗೆ ಕೀರ್ತಿಯನ್ನು ತಂದಿರುತ್ತಾರೆ. ಆ ಕಾಲೇಜಿನಲ್ಲಿ ಪ್ರತಿ ವರ್ಷವು ಕ್ಯಾಂಪಸ್ ಸೆಲಕ್ಷನ್ ಸಹ ನಡೆಯುತ್ತಿದ್ದು, ಬೇರೆ ಬೇರೆ
ಕಂಪನಿಯವರು ಬಂದು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು ಅರ್ಹತೆ ಆದಾರದ ಮೇಲೆ 2019-20 ನೇ ಸಾಲಿನಲ್ಲಿ ಈ 2 ವಿದ್ಯಾರ್ಥಿನಿಯರ ಜೊತೆಗೆ ಆ ಕಾಲೇಜಿನ ವಿವಿಧ ರ್ಕೋಸ್ ಗಳ 28 ವಿದ್ಯಾರ್ಥಿನಿಯರು ಅಂದರೆ ಒಟ್ಟು 30 ವಿದ್ಯಾರ್ಥಿನಿಯರುಗಳನ್ನು ಆಯ್ಕೆ ಮಾಡಿರುತ್ತಾರೆ, ಎಂದು ಆ ಕಾಲೇಜಿನ ಉಪನ್ಯಾಸಕರು ಇ&ಸಿ ವಿಭಾಗದ ಶ್ರೀ ಉಮಾಮಹೇಶ್ವರ್ ರವರು ತಿಳಿಸಿರುತ್ತಾರೆ.
ವಿಶೇಷತೆ ಅಂದರೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದ ಬಡ ರೈತ ಕುಟುಂಬದಲ್ಲಿ ಹುಟ್ಟಿ ಈ ಎರಡು ಹೆಣ್ಣು ಮಕ್ಕಳು ಇ&ಸಿ ಡಿಪ್ಲೊಮೊ ಒಂದೇ ಕಾಲೇಜಿನಲ್ಲಿ ಓದಿ, ಒಂದೇ “ಐ ಪೋನ್ ಮೊಬೈಲ್ ಕಂಪನಿಗೆ” ಇಬ್ಬರು ಕೆಲಸಕ್ಕೆ ಆಯ್ಕೆಯಾಗಿರುವುದು ಸಂತೋಷ ಮತ್ತು ವಿಶೇಷ ಸುದ್ದಿಯಾಗಿದೆ.