ದಾವಣಗೆರೆ ಡಿ.10
ಗ್ರಾಮ ಪಂಚಾಯಿತಿ ಚುನಾವಣೆ-2020ರ ಪ್ರಯುಕ್ತ
ಚುನಾವಣೆ ನೀತಿ ಸಂಹಿತೆಯು ನ.30 ರಿಂದ ಜಾರಿಯಾಗಿರುವ
ಹಿನ್ನಲೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತು
ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಬಕಾರಿ
ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಒಟ್ಟು
10 ಸಂಚಾರಿ ದಳಗಳನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ-1, ಉಪವಿಭಾಗ ಮಟ್ಟದಲ್ಲಿ-2 ಮತ್ತು ವಲಯ
ಮಟ್ಟದಲ್ಲಿ-05 ಒಟ್ಟು 08 ಕಂಟ್ರೋಲ್ ರೂಂಗಳನ್ನು ತೆರೆದು,
ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆಗಳನ್ನು
ಈಗಾಗಲೇ ದಿನಪತ್ರಿಕೆಗಳ ಮೂಲಕ ಸಾರ್ವಜನಿಕ ಮಾಹಿತಿಗಾಗಿ
ತಿಳಿಸಲಾಗಿದೆ. ಮೇಲ್ಕಂಡಂತೆ ರಚಿಸಲಾದ ಸಂಚಾರಿ ದಳ ಮತ್ತು
ಕಂಟ್ರೋಲ್ ರೂಂಗಳಲ್ಲಿ 24 ಗಂಟೆಯೂ
ಅಧಿಕಾರಿ/ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಚುನಾವಣೆ ನೀತಿಸಂಹಿತೆ ಜಾರಿಯಾದ ದಿ: 30.11.2020 ರಿಂದ
09.12.2020 ರವರಗೆ ಜಿಲ್ಲೆಯಾದ್ಯಂತ ಒಟ್ಟು-89 ದಾಳಿಗಳನ್ನು
ನಡೆಸಿ 17 ಘೋರ, 41 15(ಎ) ಮತ್ತು 07 ಬಿಎಲ್‍ಸಿ ಹೀಗೆ ಒಟ್ಟು 65
ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಪ್ರಕರಣಗಳಲ್ಲಿ
416.240ಲೀ. ಮದ್ಯ, 54.790 ಲೀ ಬಿಯರ್ ಹಾಗೂ 12 ದ್ವಿಚಕ್ರ
ವಾಹನ, 01 ತ್ರಿಚಕ್ರ ಆಟೋ ರಿಕ್ಷಾ ಹೀಗೆ ಒಟ್ಟು 13
ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಮದ್ಯ
ಮತ್ತು ವಾಹನಗಳ ಮೌಲ್ಯ ಅಂದಾಜು ರೂ.5,83,784/-
ಆಗಿರುತ್ತದೆ. ಉಳಿದಂತೆ ಜಾರಿ ಮತ್ತು ತನಿಖಾ ಕಾರ್ಯಗಳು
ಮುಂದುವರೆದಿರುತ್ತದೆ ಎಂದು ಡೆಪ್ಯೂಟಿ ಕಮೀಷನರ್ ಆಫ್
ಎಕ್ಸೈಜ್‍ನ ಅಧಿಕಾರಿ ಬಿ.ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.