ದಾವಣಗೆರೆ ಡಿ.10
  ರಾಜ್ಯ ಚುನಾವಣಾ ಆಯೋಗವು ದಿ: 30.11.2020 ರಂದು ಗ್ರಾಮ
ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು
ಹೊರಡಿಸಿ ಆದೇಶಿಸಿರುವಂತೆ ಮಾದರಿ ನೀತಿ ಸಂಹಿತೆಯು
ಜಾರಿಯಲ್ಲಿರುತ್ತದೆ.
   ರಾಜ್ಯದ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯ
ಸ್ಥಾನಗಳನ್ನು ಹರಾಜು ಮೂಲಕ ಖರೀದಿ ಮಾಡುವ ಹಾಗೂ
ದೇವಸ್ಥಾಗಳಿಗೆ ಹಣ ನೀಡುವ ಮೂಲಕ ಸದಸ್ಯ ಸ್ಥಾನಗಳಿಗೆ
ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆÀ ನಡೆಸದೇ
ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿರುವ ಬಗ್ಗೆ
ಆಯೋಗದ ಗಮನಕ್ಕೆ ಬಂದಿರುತ್ತದೆ.
  ದಾವಣಗೆರೆ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ದಾವಣಗೆರೆ,
ಹೊನ್ನಾಳಿ, ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಹಾಗೂ
ಎರಡನೇ ಹಂತದಲ್ಲಿ ಹರಿಹರ, ಚನ್ನಗಿರಿ ಮತ್ತು ನ್ಯಾಮತಿ
ತಾಲ್ಲೂಕುಗಳಲ್ಲಿ ಚುನಾವಣೆ ಪ್ರಕ್ರಿಯೆ
ನಡೆಯುತ್ತಿದ್ದು, ಈ ಗ್ರಾಮ ಪಂಚಾಯಿತಿಗಳಲ್ಲಿ ಅಥವಾ
ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಸದಸ್ಯ ಸ್ಥಾನಗಳನ್ನು
ಹರಾಜು ಮೂಲಕ ಅಥವಾ ದೇವಸ್ಥಾಗಳಿಗೆ ಹಣ ನೀಡುವ
ಮತ್ತು ಇತರೆ ವ್ಯವಹಾರಗಳ ಮೂಲಕ ಚುನಾವಣೆ

ಪ್ರಕ್ರಿಯೆ ನಡೆಸದೇ ಸದಸ್ಯ ಸ್ಥಾನಗಳನ್ನು ಆಯ್ಕೆ
ಮಾಡಿದ್ದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ
ದಾಖಲಿಸಲಾಗುವುದು. ಈ ಬಗ್ಗೆ ಯಾರಾದರೂ ಸಾರ್ವಜನಿಕರಲ್ಲಿ
ಮಾಹಿತಿ ಇದ್ದಲ್ಲಿ ಕೂಡಲೇ ಜಿಲ್ಲಾಧಿಕಾರಿ ಕಚೇರಿಗೆ ಅಥವಾ
ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರರಿಗೆ ಮಾಹಿತಿ ನೀಡಬೇಕು.
ಹಾಗೂ ಮಾಹಿತಿ ನೀಡಿದವರ ವಿವರಗಳನ್ನು
ಗೌಪ್ಯವಾಗಿಡಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *