ಅವಕಾಶ

ದಾವಣಗೆರೆ ಡಿ. 14
ಗುಣಮಟ್ಟದ ಬೀಜ ಮಾರಾಟ ಮಾಡಲು ಬೀಜ ಮಾರಾಟಗಾರರು ‘ಬೀಜ
ಮಾರಾಟ ಪರವಾನಗಿ’ ಪತ್ರ ಪಡೆಯುವುದು ಕಡ್ಡಾಯವಾಗಿದ್ದು,
ಸೇವಾ ಸಿಂಧು ತಂತ್ರಾಂಶದಡಿ ಇದಕ್ಕಾಗಿ ಜಿಲ್ಲೆಯ 300 ಕ್ಕೂ ಹೆಚ್ಚು
ಸೇವಾ ಸಿಂಧು ಕಿಯೋಸ್ಕ್‍ಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು
ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸಕಾಲ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ದಾವಣಗೆರೆ
ಜಿಲ್ಲೆಯ ರೈತ ಬಾಂಧವರಿಗೆ ಗುಣಮಟ್ಟದ ಬೀಜಗಳನ್ನು ಮಾರಾಟ
ಮಾಡಲು ಬೀಜ ಮಾರಾಟ ಪರವಾನಗಿ ಪತ್ರ ನೀಡಲು ಅವಕಾಶ ಕಲ್ಪಿಸಿದೆ.
ಸದ್ಯ ಡಿ. 19 ರವರೆಗೆ ಸಕಾಲ ಸಪ್ತಾಹ ಆಚರಿಸಲಾಗುತ್ತಿದ್ದು, ಈ
ಸೇವೆಯನ್ನು ‘ಸೇವಾ ಸಿಂಧು’ ತಂತ್ರಾಂಶದ ಮೂಲಕ ಪಡೆಯುವ
ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ 300 ಕ್ಕೂ ಹೆಚ್ಚು ಸೇವಾ
ಸಿಂಧು ಕಿಯೋಸ್ಕ್‍ಗಳ ಮೂಲಕ ಜಿಲ್ಲೆಯ ಬೀಜ ಮಾರಾಟಗಾರರು ಬೀಜ
ಪರವಾನಗಿ ಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ
ಮಾಹಿತಿಗೆ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರ ಕಚೇರಿ ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರದ
ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು
ದಾವಣಗೆರೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *