ದಾವಣಗೆರೆ ಡಿ.15
     ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಚಾರಿ
ನಿಯಮಗಳ ಅರಿವು ಕಾರ್ಯಕ್ರಮವನ್ನು
ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.
   ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ
ದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಜಯಶೀಲ
ಮಾತನಾಡಿ, ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಂಚಾರಿ
ನಿಯಮಗಳನ್ನು ತಿಳಿಸಿದರು ಹಾಗೂ ಚಾಲನಾ ಪರವಾನಿಗೆ
ಇಲ್ಲದೆ ವಾಹನ ಓಡಿಸಬಾರದೆಂದು ತಿಳಿಸಿ ಹೇಳಿದ ಅವರು
ಒಂದೊಮ್ಮೆ ಏನಾದರೂ ಅನಾಹುತ ಸಂಭವಿಸಿದರೆ ನಿಮ್ಮ
ಜೀವನದ ಭವಿಷ್ಯ ಹಾಳಾಗಿ ಹೋಗುತ್ತದೆ. ಹಾಗಾಗಿ ಕಾನೂನು
ಪಾಲಿಸಬೇಕೆಂದರು.

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ
ಪ್ರೊ.ವೀರೇಶ್, ಪ್ರೊ.ಭೀಮಣ್ಣ ಸುಣಗಾರ್, ಶಂಕರ್, ಶೀಲಿ
ಜಕ್ಕವರ, ಮಂಜುನಾಥ್, ವಿರೇಂದ್ರ, ದಿನೇಶ್, ತಿಪ್ಪಾರೆಡ್ಡಿ
ಇತರಿದ್ದರು.

Leave a Reply

Your email address will not be published. Required fields are marked *