ದಾವಣಗೆರೆ ಡಿ. 15
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 211 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 1087 ಸದಸ್ಯ ಸ್ಥಾನಗಳಿಗೆ ಡಿ. 22 ರಂದು ಮತದಾನ ನಡೆಯಲಿದೆ.
ಜಿಲ್ಲೆಯ ಹೊನ್ನಾಳಿ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನಲ್ಲಿ ನಡೆಯುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 88 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 1301 ಸದಸ್ಯ ಸ್ಥಾನಗಳ ಪೈಕಿ ಈಗಾಗಲೆ 211 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 1087 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 03 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. 1087 ಸದಸ್ಯ ಸ್ಥಾನಗಳಿಗಾಗಿ ಒಟ್ಟು 2981 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಅನುಸೂಚಿತ ಜಾತಿ-894, ಅನುಸೂಚಿತ ಪಂಗಡ-448, ಹಿಂದುಳಿದ ವರ್ಗ (ಅ)-214, ಹಿಂದುಳಿದ ವರ್ಗ (ಬಿ)-36, ಸಾಮಾನ್ಯ-1389 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 38 ಗ್ರಾಮ ಪಂಚಾಯತಿಗಳಿದ್ದು, 581 ಸದಸ್ಯ ಸ್ಥಾನಗಳಿವೆ. 80 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 499 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 02 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅನುಸೂಚಿತ ಜಾತಿ-413, ಅನುಸೂಚಿತ ಪಂಗಡ-179, ಹಿಂದುಳಿದ ವರ್ಗ (ಅ)-121, ಹಿಂದುಳಿದ ವರ್ಗ (ಬಿ)-21, , ಸಾಮಾನ್ಯ-663 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1397 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 28 ಗ್ರಾಮ ಪಂಚಾಯತಿಗಳಿದ್ದು, 323 ಸದಸ್ಯ ಸ್ಥಾನಗಳಿವೆ. 31 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 291 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 01 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅನುಸೂಚಿತ ಜಾತಿ-242, ಅನುಸೂಚಿತ ಪಂಗಡ-81, ಹಿಂದುಳಿದ ವರ್ಗ (ಅ)-77, ಹಿಂದುಳಿದ ವರ್ಗ (ಬಿ)-15, , ಸಾಮಾನ್ಯ-395 ಅಭ್ಯರ್ಥಿಗಳು ಸೇರಿದಂತೆ ಒಟ್ಟು 810 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಜಗಳೂರು ತಾಲ್ಲೂಕಿನಲ್ಲಿ ಒಟ್ಟು 22 ಗ್ರಾಮ ಪಂಚಾಯತಿಗಳಿದ್ದು, 397 ಸದಸ್ಯ ಸ್ಥಾನಗಳಿವೆ. 100 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 297 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅನುಸೂಚಿತ ಜಾತಿ-239, ಅನುಸೂಚಿತ ಪಂಗಡ-188, ಹಿಂದುಳಿದ ವರ್ಗ (ಅ)-16, ಸಾಮಾನ್ಯ-331 ಅಭ್ಯರ್ಥಿಗಳು ಸೇರಿದಂತೆ ಒಟ್ಟು 774 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.