ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.16 ಹೊನ್ನಾಳಿ ಪಟ್ಟಣದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇಂದು ಸಕ್ರೀಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಅಂದೋಲನ ಕಾರ್ಯಕ್ರಮದ ಉದ್ಗಾಟನೆಯನ್ನು ತಾಲೂಕು ದಂಢಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ನೆರೆವೇರಿಸಿದರು.
ನಂತರ ಕ್ಷಯ ರೋಗದ ಬಗ್ಗೆ ಎ.ಸಿ.ಎಫ್ ಕಲಾತಂಡ ದಾವಣಗೆರೆ ಇವರು ಬೀದಿ ನಾಟಕ ಮಾಡುವುದರ ಮೂಲಕ ಜನರಿಗೆ ಜಾಗೃತಿಯನ್ನು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ;- ಹೊನ್ನಾಳಿ ತಾಲೂಕಿನ ದಂಢಾಧಿಕಾರಿಗಳಾದ ತುಷಾರ್ ಬಿ ಹೊಸೂರಾ, ಜಿಲ್ಲಾ ಕ್ಷಯ ರೋಗ
ಅಧಿಕಾರಿಗಳಾದ ಗಂಗಾಧರ್, ಮಾಲಿಂಗಪ್ಪ, ಶರೀಫ್, ಪ್ರಭಾರಿ ಟಿ.ಹೆಚ್.ಒ ಗಿರೀಶ್, ತಾಲೂಕು ಹಿರಿಯ ಪುರುಷ ಆರೋಗ್ಯ ಸಹಾಯಕರಾದ ಶಿವ ಪದ್ಮ, ಹೊನ್ನಾಳಿಯ ಕಿರಿಯ ಸಹಾಯಕಿಗಳಾದ ನಾಗರತ್ನಮ್ಮ, ಮತ್ತು ಭಾಗ್ಯ ಹಾಗೂ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.