ದಾವಣಗೆರೆ ಡಿ.16
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್(ಕೆಎಸ್‍ಆರ್‍ಪಿ) ಮತ್ತು
ಸಬ್‍ಇನ್ಸ್‍ಪೆಕ್ಟರ್(ಕೆಎಸ್‍ಐಎಸ್‍ಎಫ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ
4460 ಅಭ್ಯರ್ಥಿಗಳಿಗೆ ಡಿ.20 ರ ಭಾನುವಾರ ಬೆಳಿಗ್ಗೆ 10.30 ರಿಂದ 11.30
ರವರೆಗೆ ಮತ್ತು ಮಧ್ಯಾಹ್ನ 1 ರಿಂದ 2.30 ಗಂಟೆವರೆಗೆ ಲಿಖಿತ
ಪರೀಕ್ಷೆಯನ್ನು ದಾವಣಗೆರೆ ನಗರದ ಈ ಕೆಳಕಂಡ
ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು.

ರೋಲ್ ಸಂಖ್ಯೆ 4000001 ರಿಂದ 4000900 ರವರೆಗೆ ಸರ್ಕಾರಿ
ಪ್ರಥಮ ದರ್ಜೆ ಕಾಲೇಜು, ಅನುಭವ ಮಂಟಪ ಶಾಲೆ ಹತ್ತಿರ,
ದಾವಣಗೆರೆ ಇಲ್ಲಿ ಪರೀಕ್ಷೆ ನಡೆಸಲಾಗುವುದು. ರೋಲ್ ಸಂಖ್ಯೆ
4000921 ರಿಂದ 4001420 ರವರೆಗೆ ಎವಿ ಕಮಲಮ್ಮ ಮಹಿಳಾ
ಕಾಲೇಜು, ಅಕ್ಕಮಹಾದೇವಿ ರಸ್ತೆ, ದಾವಣಗೆರೆ. 4001441 ರಿಂದ
4001940 ಸಿದ್ದಗಂಗಾ ಪಿಯು ಕಾಲೇಜು, ಸ್ಟೇಡಿಯಂ ಹತ್ತಿರ,
ಸಿದ್ದಲಿಂಗೇಶ್ವರ ನಗರ, 18 ಕ್ರಾಸ್, ಕೆಟಿಜೆ ನಗರ, ದಾವಣಗೆರೆ.
4001961 ರಿಂದ 4002460 ವರೆಗೆ ಜಿ.ಎಂ.ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್
&ಚಿmಠಿ; ಟೆಕ್ನಾಲಜಿ, ಹರಿಹರ ರಸ್ತೆ, ದಾವಣಗೆರೆ. 4002481 ರಿಂದ 4002980
ರವರೆಗೆ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆ, ಶಿವಕುಮಾರ
ಸ್ವಾಮಿ ಬಡಾವಣೆ, ದಾವಣಗೆರೆ. 4003001 ರಿಂದ 4003500 ರವರೆಗೆ
ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜು, ಪಿ.ಜೆ ಬಡಾವಣೆ ದಾವಣಗೆರೆ.
4003521 ರಿಂದ 4003980 ರವರೆಗೆ ಸರ್ಕಾರಿ ಬಾಲಕರ ಪದವಿಪೂರ್ವ
ಕಾಲೇಜು, ಹೈಸ್ಕೂಲ್ ಮೈದಾನ, ಪಿಜೆ ಬಡಾವಣೆ, ದಾವಣಗೆರೆ. 4004001
ರಿಂದ 4004400 ರವರೆಗೆ ಜಿ.ಎಂ.ಹಾಲಮ್ಮ ಪಿಯು ಕಾಲೇಜ್, ಜಿಎಂಐಟಿ
ಕ್ಯಾಂಪಸ್, ಹರಿಹರ ರಸ್ತೆ, ದಾವಣಗೆರೆ. 4004421 ರಿಂದ 4004620
ರವರೆಗೆ ಎಸ್‍ಬಿಸಿ ಪ್ರಥಮ ದರ್ಜೆ ಕಾಲೇಜು ‘ಎ’ ಬ್ಲಾಕ್
ಎಸ್.ಎಸ್.ಬಡಾವಣೆ ದಾವಣಗೆರೆ ಇಲ್ಲಿ ಪರೀಕ್ಷೆಗಳನ್ನು
ನಡೆಸಲಾಗುವುದು.
ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ
ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಅಗತ್ಯ
ದಾಖಲಾತಿಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ
ಸಮಯಕ್ಕಿಂತ 60 ನಿಮಿಷ ಮುಂಚಿತವಾಗಿ ಹಾಜರಾಗಬೇಕೆಂದು
ಪೊಲೀಸ್ ಅಧಿಕ್ಷಕರಾದ ಹನುಮಂತರಾಯ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *