ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳಿಗೆ ಎಲ್ಲ ಸೌಲಭ್ಯ
ಒದಗಿಸಲು ಡಿಸಿ ಸೂಚನೆ
ದಾವಣಗೆರೆ ಡಿ.18
ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳಿಗೆ ಸರ್ಕಾರ ನೀಡುವ ಎಲ್ಲ
ರೀತಿಯ ಸೌಲಭ್ಯಗಳನ್ನು ನೀಡುವುದರೊಂದಿಗೆ ಸರ್ವೇ
ಕಾರ್ಯದಲ್ಲಿ ಬಿಟ್ಟು ಹೋಗಿರುವವರನ್ನು ಸೇರಿಸಲು
ಮತ್ತೊಮ್ಮೆ ಸರ್ವೇ ಕಾರ್ಯ ಮಾಡುವಂತೆ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿ ಕಚೇರಿ ಸಭಾಂಗಣಲದಲ್ಲಿ ಇಂದು ನಡೆದ ಮ್ಯಾನುವೆಲ್
ಸ್ಕ್ಯಾವೆಂಜರ್ಸ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ
ಅಧಿನಿಯಮ 2013 ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ
ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳಿಗೆ ದೊರೆಯುವ
ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅವರುಗಳ
ಅಭಿವೃದ್ದಿ ಕಾರ್ಯಕ್ರಮಗಳಿಗೆ ಹಣ ಮೀಸಲಿರಿಸಬೇಕೆಂದು
ತಿಳಿಸಿದ ಜಿಲ್ಲಾಧಿಕಾರಿಗಳು, ಮ್ಯಾನ್ಯುವಲ್ ಸ್ಕ್ಯಾವೆಂಜರ್ ಮತ್ತು
ಪೌರಕಾರ್ಮಿಕರಿಗೆ ಎರಡನೇ ಸುತ್ತಿನ ಕೋವಿಡ್ ತಪಾಸಣೆ
ಮಾಡಿಸುವಂತೆ ಸೂಚಿಸಿದರು.
ಮ್ಯಾನ್ಯುವಲ್ ಸ್ಕ್ಯಾವೆಂಜರ್ ಸಂಘದ ಶಂಕರ್ ಮಾತನಾಡಿ,
ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಸ್ವ ಉದ್ಯೋಗ ಕೈಗೊಳ್ಳಲು
ರೂ.25 ಸಾವಿರಗಳ ಸಹಾಯಧನ ನೀಡಲು
ಮಹಾನಗರಪಾಲಿಕೆಗೆ ಸರ್ಕಾರದ ಆದೇಶವಿದ್ದು, ಈ ಹಿಂದೆ
ರೂ.10 ಸಾವಿರವಿದ್ದ ಸಹಾಯಧನವನ್ನ ರೂ.25 ಸಾವಿರಕ್ಕೆ
ಹೆಚ್ಚಿಸಲಾಗಿದೆ. ಆದರೆ ಈ ಸೌಲಭ್ಯ ನೀಡಲು ಪಾಲಿಕೆಯಿಂದ ಹಿಂದೇಟು
ಹಾಕುತ್ತಿದ್ದು ಕೂಡಲೇ ಈ ಸೌಲಭ್ಯ ಒದಗಿಸುವಂತೆ
ಕೋರಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಮಹಾನಗರಪಾಲಿಕೆ
ಆಯುಕ್ತರು ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಸಂಘದ
ಪದಾಧಿಕಾರಿಗಳ ಸಭೆ ನಡೆಸಿ ಅವರುಗಳಿಗೆ ಇರುವ ಎಲ್ಲ
ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು
ತಿಳಿಸಿದರು.
ಸಂಘದ ಉಚ್ಚೆಂಗಪ್ಪ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ
ಪೌರ ಕಾರ್ಮಿಕರನ್ನು ನೇಮಸಿಕೊಳ್ಳುವಾಗ ಸಫಾಯಿ
ಕರ್ಮಚಾರಿಗಳಿಗೆ ಆದ್ಯತೆ ನೀಡಲು ಸರ್ಕಾರಿ ಆದೇಶವಿದ್ದು,
ಇದನ್ನು ಪರಿಗಣಿಸುವಂತೆ ಕೋರಿದರು.
ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ ಮಾತನಾಡಿ,
ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ
ಇನ್‍ಸ್ಯಾನಿಟರಿ ಲೆಟ್ರಿನ್‍ಗಳು ಇರುವುದಿಲ್ಲ. ಸ್ವಯಂಘೊಷಣೆ
ಮಾಡಿಕೊಂಡ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್‍ಗಳ ವಿಶೇಷ
ಮರುಸಮೀಕ್ಷೆಯಲ್ಲಿ ಹಳೆ ಮತ್ತು ಹೊಸದು ಸೇರಿ ಒಟ್ಟು
346 ಅರ್ಜಿಗಳು ಬಂದಿದ್ದು, ನವದೆಹಲಿಯ ಎನ್‍ಎಸ್‍ಕೆಎಫ್‍ಡಿಸಿಯ
ಸಮನ್ವಯಾಧಿಕಾರಿ ಬಾಬುಲಾಲ್ ಇವರು ಅ.18 ರಂದು ಸ್ಥಳ
ಪರಿವೀಕ್ಷಣೆ ಮಡಿ ಪರಿಶೀಲಿಸಿರುತ್ತಾರೆ. ಅದರಲ್ಲಿ 245 ಅರ್ಜಿಗಳು
ಅನುಮೋದನೆಗೊಂಡಿದ್ದು 101 ಅರ್ಜಿಗಳು
ತಿರಸ್ಕøತಗೊಂಡಿರುತ್ತವೆ. ಅಂತಿಮವಾಗಿ 245 ಅರ್ಜಿಗಳನ್ನು
ಅಂಗೀಕರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದ್ದು
ಆಯ್ಕೆಗೊಂಡ ಅರ್ಜಿದಾರರಿಗೆ ಗುರುತಿನ ಚೀಟಿ ನೀಡುವ ಕಾರ್ಯ
ಪ್ರಗತಿಯಲ್ಲಿದೆ.
ಪಾಲಿಕೆಯಲ್ಲಿ 02 ಸಕ್ಕಿಂಗ್ ಮತ್ತು 02 ಜಟ್ಟಿಂಗ್
ಯಂತ್ರಗಳಿವೆ. ಪ್ರತಿ ಪೌರಕಾರ್ಮಿಕರಿಗೆ ವಾರ್ಷಿಕವಾಗಿ
ಸುರಕ್ಷತಾ ಪರಿಕರಗಳನ್ನು ನೀಡಲಾಗುತ್ತದೆ. ಖಾಯಂ
ಮತ್ತು ನೇರ ಪಾವತಿ ಪೌರಕಾರ್ಮಿಕರಿಗೆ ಮತ್ತು ಅವರ
ಅವಲಂಬಿತರಿಗೆ ಮಾಸ್ಟರ್ ಹೆಲ್ತ್ ಚೆಕ್‍ಅಪ್ ಮತ್ತು ಹೆಪಟೈಟಿಸ್
ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ
ನೀಡಿದರು.
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮ
ಮಾತನಾಡಿ, ಪಾಲಿಕೆ, ಹರಿಹರ ನಗರಸಭೆ, ಚನ್ನಗಿರಿ ಪುರಸಭೆ,
ಮಲೆಬೆನ್ನೂರು, ಜಗಳೂರು ಮತ್ತು ಹೊನ್ನಾಳಿ ಪಟ್ಟಣ
ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್
ಸಮೀಕ್ಷೆ ನಡೆಸಿ 497 ಅರ್ಜಿ ಸ್ವೀಕರಿಸಿ 380 ಅಂಗೀಕರಿಸಲಾಗಿದೆ 117
ತಿರಸ್ಕøತವಾಗಿದ್ದು, 380 ಜನರ ಪಟ್ಟಿಯನ್ನು ಎನ್‍ಎಸ್‍ಕೆಎಫ್‍ಡಿಸಿ ಗೆ
ಸಲ್ಲಿಸಲಾಗಿದೆ. ಹಾಗೂ ಸಫಾಯಿ ಕರ್ಮಚಾರಿಗಳ ಆಯೋಗದ
ನಿರ್ದೇಶನದಂತೆ ಸ್ಥಳೀಯ ಸಂಸ್ಥೆವಾರು ಗುರುತಿಸಲ್ಪಟ್ಟ
ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್‍ಗಳಿಗೆ ಗುರುತಿನ ಚೀಟಿ ವಿತರಿಸಲು
ಕ್ರಮ ಕೈಗೊಳ್ಳಲಾಗಿರುತ್ತದೆ. ಹಾಗೂ 18 ಜನರನ್ನು
ಸಮರ್ಪಕ ದಾಖಲಾತಿ ಒದಗಿಸದೇ ಇರುವ ಕಾರಣ ಹೊರತುಪಡಿಸಿ
362 ಫಲಾನುಭವಿಗಳಿಗೆ ಒಟಿಸಿಎ ಮೊತ್ತ ರೂ.40,000 ಜಮಾ
ಮಾಡಲಾಗಿರುತ್ತದೆ ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಸಮಾಜ ಕಲ್ಯಾಣ
ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ನಗರಾಭಿವೃದ್ದಿ
ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಮ್ಯಾನ್ಯುವಲ್
ಸ್ಕ್ಯಾವೆಂಜರ್ಸ್ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ
ಅಧಿನಿಯಮ ಸಮಿತಿಯ ಸದಸ್ಯರಾದ ಬಾಬಣ್ಣ.ಡಿ.ಎಸ್, ಮಂಜಮ್ಮ,
ಎನ್.ವಾಸುದೇವ್ ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.