ಪ್ರಗತಿ ಸಾಧಿಸುವಂತೆ ಡಿಸಿ ಸೂಚನೆ
ದಾವಣಗೆರೆ ಡಿ.18
ವಿಶೇಷ ಘಟಕ ಯೋಜನೆ/ಬುಡಕಟ್ಟು
ಉಪಯೋಜನೆ(ಎಸ್‍ಸಿಪಿ/ಟಿಎಸ್‍ಪಿ)ಯಡಿ ಬಿಡುಗಡೆಯಾದ
ಅನುದಾನವನ್ನು ಶೀಘ್ರವಾಗಿ ನಿಗದಿತ ಕಾರ್ಯಕ್ರಮಗಳಿಗೆ
ಬಳಕೆ ಮಾಡಿ ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ
ನಿಡಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ
ಎಸ್‍ಸಿಪಿ/ಟಿಎಸ್‍ಪಿ ಯೋಜನೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ ಎಸ್‍ಸಿಪಿ ಯೋಜನೆಯಡಿ ಒಟ್ಟಾರೆ
ಶೇ.57 ಮತ್ತು ಟಿಎಸ್‍ಪಿ ಯೋಜನೆಯಡಿ ಶೇ.66 ಪ್ರಗತಿ
ಸಾಧಿಸಲಾಗಿದೆ. ಆದಷ್ಟು ಶೀಘ್ರವಾಗಿ ಅನುದಾನವನ್ನು ಬಳಕೆ
ಮಾಡಿ, ನಿಗದಿತ ಕಾರ್ಯಕ್ರಮಗಳು, ಕಾಮಗಾರಿಗಳನ್ನು
ಪೂರ್ಣಗೊಳಿಸಿ ಗುರಿ ಸಾಧಿಸಬೇಕೆಂದು ಅಧಿಕಾರಿಗಳಿಗೆ
ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಎಸ್‍ಸಿಪಿ
ಯೋಜನೆಯಡಿ ಶೇ.80.45 ಮತ್ತು ಟಿಎಸ್‍ಪಿ ಯೋಜನೆಯಡಿಯ
ಕಾರ್ಯಕ್ರಮಗಳ ಶೇ.89.58 ಪ್ರಗತಿ ಸಾಧಿಸಲಾಗಿದೆ
ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕಾಮರ್ಸ್ ವಿಭಾಗದ
ಪ್ರೊ.ಲಕ್ಷಣ್ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ 395
ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ವಿವಿ
ಯ ವಿವಿಧ ಫೆಲೋಶಿಪ್‍ಗೇ ರೂ.60 ಲಕ್ಷ ವೆಚ್ಚವಾಗಲಿದ್ದು
ರೂ.50 ಲಕ್ಷ ಮಾತ್ರ ನಿಗದಿಯಾಗಿದೆ. ಹಾಗೂ 24 ಕ್ಕೂ ಹೆಚ್ಚು
ಅನುಮೋದಿತ ಕಾರ್ಯಕ್ರಮಗಳಿದ್ದು ಅನುದಾನದ
ಕೊರತೆಯಿಂದ ಮಾಡಲಾಗುತ್ತಿಲ್ಲ. ಅನುದಾನವನ್ನು
ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ದಾವಣಗೆರೆ ವಿಶ್ವವಿದ್ಯಾನಿಲಯದ
ಎಸ್‍ಸಿಟಿ/ಟಿಎಸ್‍ಪಿ ಯೋಜನೆಯಡಿ ಬರುವ ವಿದ್ಯಾರ್ಥಿಗಳ ಸಂಖ್ಯೆ,
ಕಾರ್ಯಕ್ರಮಗಳ ವಿವಿರ, ಅಗತ್ಯ ಅನುದಾನದ ಕುರಿತು
ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ
ವತಿಯಿಂದ ಈ ಯೋಜನೆಯಡಿ ನಿರ್ಮಿಸಲಾಗಿರುವ ಚೆಕ್ ಡ್ಯಾಂಗಳ
ವಿವರ ನೀಡಬೇಕು. ತಾವು ಹಾಗೂ ಜಿ.ಪಂ ಸಿಇಓ ಭೇಟಿ ನೀಡಿ ಪರಿಶೀಲನೆ
ನಡೆಸುತ್ತೇವೆ ಎಂದರು.
ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ
ಮಾತನಾಡಿ ಎಸ್‍ಸಿಪಿ ಯೋಜನೆಯಡಿ ಶೇ 60.55 ಪ್ರಗತಿ
ಸಾಧಿಸಲಾಗಿದ್ದು, ಟಿಎಸ್‍ಪಿ ಯೋಜನೆಯಡಿ ಸಿಸಿ ರಸ್ತೆ, ಸೋಲಾರ್ ನೀರು
ವ್ಯವಸ್ಥೆ ಒದಗಿಸಲು ಟೆಂಡರ್ ಕರೆಯಲಾಗಿದೆ. ಹಾಗೂ
ಪ.ಪಂಗಡ ವಿದ್ಯಾರ್ಥಿಗಳಿಗೆ ಐಎಎಸ್/ಕೆಎಎಸ್ ಕೋಚಿಂಗ್ ನೀಡಲು
ರೂ.12 ಲಕ್ಷ ಅನುದಾನ ನಿಗದಿಯಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಪ್ರತ್ರಿಕ್ರಿಯಿಸಿ ಎಸ್‍ಟಿ ಗೆ ಸೇರಿದ
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ದಾವಣಗೆರೆ ವಿವಿ
ರಿಜಿಸ್ಟ್ರಾರ್‍ರನ್ನು ಸಂಪರ್ಕಿಸಿ ಕೋಚಿಂಗ್ ಕೊಡಿಸುವಂತೆ ಸಲಹೆ
ನೀಡಿದರು.
ಹಾಗೂ ಅತಿ ಕಡಿಮೆ ಪ್ರಗತಿ ಸಾಧಿಸಿರುವ ಹಾಗೂ ಸಭೆಗೆ
ಗೈರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ
ಮಾಡುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಸಭೆಯಲ್ಲಿ ತೋಟಗಾರಿಕೆ, ರೇಷ್ಮೆ,
ಮೀನುಗಾರಿಕೆ, ಅರಣ್ಯ ಇಲಾಖೆ, ಸಹಕಾರ, ಮಹಿಳಾ ಮತ್ತು
ಮಕ್ಕಳ ಅಭಿವೃದ್ದಿ ಇಲಾಖೆ, ಕೈಮಗ್ಗ ಮತ್ತು ಜವಳಿ, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಪ್ರವಾಸೋದ್ಯಮ, ಶಿಕ್ಷಣ ಇಲಾಖೆ ಕೈಗಾರಿಕಾ ಕೇಂದ್ರ, ಗ್ರಾಮಿಣ
ಕುಡಿಯುವ ನೀರು, ಪಶುಪಾಲನೆ, ಕೌಶಲ್ಯಾಭಿವೃದ್ದಿ ಸೇರಿದಂತೆ
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ನಿಗದಿತ ಅವಧಿಯೊಳಗೆ
ಪ್ರಗತಿ ಸಾಧಿಸುವಂತೆ ತಿಳಿಸಿದರು.
ದೌರ್ಜನ್ಯ ಪ್ರತಿಬಂಧ ಕಾಯ್ದೆ 1989 ರ ಜಿಲ್ಲಾ ಜಾಗೃತಿ ಮತ್ತು
ಉಸ್ತುವಾರಿ ಸಮಿತಿ ಸಭೆ : ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ
ರೇಷ್ಮಾ ಕೌಸರ್ ಮಾತನಾಡಿ, 2020 ರ ಆಗಸ್ಟ್‍ಯಿಂದ
ನವೆಂಬರ್‍ವರೆಗೆ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಜಾತಿ
ನಿಂದನೆ ಮತ್ತು ಹಲ್ಲೆ, ಅಪಹರಣ ಮತ್ತು ಅಕ್ರಮ ನಿಗ್ರಹ,
ಕೊನೆ, ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತಹ ಮಾತು
ಅಥವಾ ಕೃತ್ಯಕ್ಕೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಒಟ್ಟು 14
ಅರ್ಜಿಗಳು ಸ್ವೀಕೃತವಾಗಿದ್ದು, 12 ಪ್ರಕರಣಗಳಿಗೆ ಒಟ್ಟು
ರೂ. 18,50,000 ಪರಿಹಾರ ನೀಡಲಾಗಿದೆ. ಎರಡು ಪ್ರಕರಣ
ಸಮರ್ಪಕ ದಾಖಲಾತಿ ಇಲ್ಲದ ಕಾರಣ ಬಾಕಿ ಇಡಲಾಗಿದೆ.
ದಾವಣಗೆರೆ 2ನೇ ಅಧಿಕ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳವರ
ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 ರ ಅಡಿಯಲ್ಲಿ ನವೆಂಬರ್
ಅಂತ್ಯದವರೆಗೆ ಒಟ್ಟು 80 ಪ್ರಕರಣಗಳು ಬಾಕಿ ಇವೆ ಎಂದು
ತಿಳಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ದೌರ್ಜನ್ಯ ಪ್ರತಿಬಂಧ
ಕಾಯ್ದೆಯಡಿ ಸ್ವೀಕೃತವಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ
ಸಂತ್ರಸ್ತರಿಗೆ 24 ಗಂಟೆಯೊಳಗೆ ಪರಿಹಾರ ನೀಡುವಂತೆ
ಸೂಚಿಸಿದರಲ್ಲದೇ, ನ್ಯಾಯಾಲಯದಲ್ಲಿ ಬಾಕಿ ಇರುವ
ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ
ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಸಮಾಜ
ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್,
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ,
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್
ಬೊಮ್ಮನ್ನಾರ್, ಡಿಡಿಪಿಐ ಪರಮೇಶ್ವರಪ್ಪ, ಮಹಿಳಾ ಮತ್ತು
ಮಕ್ಕಳ ಅಭಿವೃದ್ದಿ ಇಲಾಖೆ ಡಿಡಿ ವಿಜಯಕುಮಾರ್ ಸೇರಿದಂತೆ ಜಿಲ್ಲಾ
ಮಟ್ಟದ ಅಧಿಕಾರಿಗಳು ಹಾಜರಿದ್ದರು.