ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ರಾಂಪುರ ಗ್ರಾಮ ಪಂಚಾಯಿತಿ ಚುನಾವಣೆಗೆ
ಹೊಟ್ಯಾಪುರ ಗ್ರಾಮದ ಸಾಮಾನ್ಯ ಮಹಿಳಾ ಕ್ಷೇತ್ರದ ಅಭ್ಯರ್ಥಿಯಾಗಿ “ಸುಶೀಲಮ್ಮ” ಆದ ನಾನು ಸ್ಪರ್ಧಿಸಿರುತ್ತೇನೆ. ಸರ್ಕಾರದಿಂದ ಬರುವ ಎಲ್ಲಾ ರೀತಿಯ ಸವಲತ್ತುಗಳನ್ನು ಜನರ ಬಳಿಗೆ ತಲುಪಿಸಿ ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗುವ ದೃಷ್ಟಿಯಿಂದ ಹಾಗೂ ತಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಲು ಉತ್ಸುಕನಾಗಿದ್ದೇನೆ. ಗೆದ್ದ ನಂತರ ಅರ್ಹರಿಗೆ ಯಾವುದೆ ರೀತಿಯ ಭೇದ ಮಾಡದೆ ಸರ್ಕಾರದಿಂದ ನ್ಯಾಯವಾಗಿ ದೂರಕಬೇಕಾದ ಸೌವಲತ್ತುಗಳನ್ನು ಒದಗಿಸುವುದೇ ನನ್ನ ಗುರಿ ಆದ್ದರಿಂದ ತಮ್ಮ ಅಮೂಲ್ಯವಾದ ಮತವನ್ನು ಈ ಕೆಳಗಿನ ಕ್ರ.ಸಂ. 8ರ “ಟಯರ್” ಗುರುತಿಗೆ ಮತ ನೀಡುವುದರ ಮೂಲಕ ನನ್ನನ್ನು ಜಯಶೀಲರನ್ನಾಗಿ ಮಾಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.
ತಮ್ಮ ಸೇವಾಕಾಂಕ್ಷಿ,
ಕ್ರ.ಸಂ 08 “ಟಯರ್” ಗುರುತು ಸುಶೀಲಮ್ಮ