ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ಟಿ.ಬಿ ಸರ್ಕಲ್ ಗುರುಭವನ ಪಕ್ಕ ಹೊನ್ನಾಳಿ ವತಿಯಿಂದ ಇಂದು 2019/20 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಗೊಲ್ಲರಹಳ್ಳಿಯ ತರಳುಬಾಳು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತು.
ಮಾಜಿ ಶಾಸಕರು ಮತ್ತು ಈ ಸೊಸೈಟಿಯ ಹಾಲಿ ಸದಸ್ಯರು ಹಾಗೂ ರಾಜ್ಯ ಸಹಕಾರ ಮಂಡಳಿಯ ನಿರ್ದೇಶಕರಾದ
ಡಿ.ಜಿ ಶಾಂತನಗೌಡ್ರು ರವರು ಈ ಮಹಾಸಭೆಯ ಉದ್ಗಾಟನೆಯನ್ನು ಮಾಡಿದರು.
ನಂತರ ಮಾತನಾಡಿದ ಅವರು ಎಲ್ಲಾ ರೈತರ ಮತ್ತು ಈ ಮಂಡಳಿಯ ಸರ್ವ ಸದಸ್ಯರುಗಳ ಸಹಕಾರದಿಂದ
ನಡೆಯುತ್ತಲಿದ್ದು ಈ ಸಂಸ್ಥೆಯ ಆದಾಯ ಹೆಚ್ಚಿಸುವಂತೆ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಸಂಘವು ಪೂರ್ಣ ಪ್ರಮಾಣದಲ್ಲಿ ದುಡಿಯಲು ಸಜ್ಜಾಗುವಂತೆ ವ್ಯವಸ್ಥೆ ಮಾಡಿದ್ದು, ಆದರಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಂಡಿರುತ್ತದೆ. ಸಂಘವು ಗೊಬ್ಬರ ಹಾಗೂ ರೈತರ ಕೃಷಿ ಉತ್ಪನ್ನ ಖರೀದಿ ವಿಭಾಗವನ್ನು ಪ್ರಾರಂಭಿಸುವಲ್ಲದೆ ಸಂಘದಲ್ಲಿ ನೂತನವಾಗಿ ಬಿನ್ನಿ ಆದುನಿಕ ಅಕ್ಕಿ ಗಿರಣಿ ಯಂತ್ರವನ್ನು ಸ್ಥಾಪಿಸಿದ್ದು, ಮುಂದಿನ ಸಾಲಿನಲ್ಲಿ ಗೋಧಾಮಗಳನ್ನು ಕಟ್ಟಿಸಲು ಕ್ರಮ
ಕೈಗೊಳ್ಳಲಾಗುವುದು ಎಂದು ಹೇಳಿದರು.
ಆ ಸಂಸ್ಥೆಯ ಸದಸ್ಯರುಗಳ ಮಕ್ಕಳುಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2 ಸಾವಿರ ರೂಗಳಂತೆ ಕೊಟ್ಟು ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನೂ ಅತಿ ಹೆಚ್ಚು ಅಂಕ ಪಡೆಯಲೆಂದು ಪ್ರೋತ್ಸಾಹ ಧನವನ್ನು ಕೊಡುವುದರ ಮೂಲಕ ಆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಕರಾದ ಜಿ.ಇ ಮುರಗೇಶಪ್ಪ ಇವರು ಸವಿಸ್ಥಾರವಾಗಿ ಸರ್ವ ಸದಸ್ಯರುಗಳಿಗೆ 2019/20 ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಕೆಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ;- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು, ಅಧ್ಯಕ್ಷರಾದ ಕೆ.ಇ ಈಶ್ವರಪ್ಪ, ಉಪಾಧ್ಯಕ್ಷರಾದ ಬಸವರಾಜ್, ನಿರ್ದೇಶಕರುಗಳಾದ ಡಿ ಮಂಜುನಾಥ್, ಹೆಚ್ ಬಸವರಾಜಪ್ಪ, ಎ.ಜಿ ಗಣೇಶ್, ಹೆಚ್.ಸಿ ಶೇಕರಪ್ಪ, ಇನ್ನೂ ಮುಂತಾದ ಸದಸ್ಯರುಗಳು ಹಾಗೂ ಮುಖ್ಯಕಾರ್ಯನಿರ್ವಾಹಣಧಿಕಾರಿ ಜಿ.ಇ ಮುರಗೇಶ್, ಸಿಬ್ಬಂದಿ ವರ್ಗ ಗೋಪಿ, ಸುರೇಶ್, ಅರುಣ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.