ಹೊನ್ನಾಳಿ: ‘ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರನ್ನು ಸರ್ಕಾರವು ಮಲತಾಯಿ ಧೋರಣೆಯಿಂದ ನೋಡುತ್ತಿರುವುದು ತಪ್ಪು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು’ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ್ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಹೊಂದಿದ ನಂತರ ಆ ಹುದ್ದೆಗೆ ನೌಕರರನ್ನು ತಕ್ಷಣ ತುಂಬಿಕೊಳ್ಳುವAತೆ ವ್ಯವಸ್ಥೆ ಮಾಡಬೇಕು. ಬಹುದಿನಗಳಿಂದ ನೌಕರರು ಪಿಂಚಣಿಗಾಗಿ ಹೋರಾಟ ಮಾಡುತ್ತಿದ್ದಾರೆ ಅವರಿಗೆ ಪಿಂಚಣಿ ಸೌಲಭ್ಯವು ಸಿಗಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯವನ್ನು ಒದಗಿಸಬೇಕು. ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ವಹಿಸುತ್ತಿವೆ ಅದನ್ನು ಮನಗಂಡು ಅವರಿಗೆ ಮೂಲಭೂತ ಸೌಲಭ್ಯವನ್ನು ನೀಡುವಂತೆ ಆಗಬೇಕು’ ಎಂದರು.
‘ಬಹುದಿನಗಳಿAದ ಪಿಂಚಣಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಅದೆಷ್ಟೋ ಶಿಕ್ಷಕರು ಪಿಂಚಣಿ ಇಲ್ಲದೆ ನಿವೃತ್ತರಾಗಿದ್ದಾರೆ. ಅವರ ಜೀವನ ದುಸ್ತರವಾಗಿದೆ. ಶಿಕ್ಷಕರ ಕುಟುಂಬಗಳು ಬೀದಿಗೆ ಬೀಳುವ ಮೊದಲೆ ಸರ್ಕಾರವು ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಣಿ ನೀಡುವಂತೆ ಆಗಬೇಕು’ ಎಂದು ಸಂಘದ ಅಧ್ಯಕ್ಷ ಎಚ್.ಡಿ ಧನಂಜಯ್ ಹೇಳಿದರು.
‘ ಸರ್ಕಾರಿ ಶಾಲೆಯಲ್ಲಿ ಅನುಸರಿಸುವಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯೂ ವಿದ್ಯಾರ್ಥಿ ಶಿಕ್ಷಕರ ಅನುಪಾತ ಅನುಸರಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ನೀಡಬೇಕು’ ಎಂದು ಸಂಘದ ಕಾರ್ಯದರ್ಶಿ ಗಿರೀಶ್ ಎನ್.ಎಂ ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ದೊಡ್ಡಪ್ಪ ಜಿ, ಖಜಾಂಚಿ ಬಿ.ರಾಘವೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಬಿ.ವಿ ಹನುಮಂತಪ್ಪ, ಜಯದೇವಪ್ಪ, ನಿರ್ದೇಶಕರುಗಳಾದ ಎಂ.ಎಸ್ ಸತೀಶ್, ರಾಘವೇಂದ್ರ, ಮಾಲತೇಶ್, ಅಜಯ್, ರಂಜಿತ್, ಅಶೋಕ್, ಮಂಜಪ್ಪ, ಈಶ್ವರಯ್ಯ, ಪ್ರಕಾಶ್, ರವಿ, ಶಿವನಗೌಡ ಮತ್ತಿತರು ಇದ್ದರು.
ಹೊನ್ನಾಳಿ ಹಿರೆಕಲ್ಮಠದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಿದ್ದಗೊಂಡ ಕ್ಯಾಲೆಂಡರ್ ಅನ್ನು ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಬಿಡುಗಡೆ ಮಾಡಿದರು