ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪಟ್ಟಣದ ಶ್ರೀ ಲಕ್ಷೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಇಂದು 6ನೇ ವರ್ಷದ 2019/20 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆಯಿತು. ಈ ಮಹಾ ಸಭೆಯ ಉದ್ಗಾಟನೆಯನ್ನು ಶ್ರೀ ಲಕ್ಷೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಗುರುದತ್ ರವರು ನೆರೆವೇರಿಸಿದರು.
ನಂತರ ಅಧ್ಯಕ್ಷರಾದ ಶ್ರೀಮತಿ ಪ್ರಭಾರವರು ಮಾತನಾಡಿ 6ನೇ ವರ್ಷದ ವಾರ್ಷಿಕ ಮಹಾಸಭೆಯು ಪ್ರತಿ ವರ್ಷದಂತೆ ಈ ವರ್ಷವು ಸಹ ಅದ್ದೂರಿಯಾಗಿ ನಡೆಯಬೇಕಿತ್ತು. ಕೊರೋನಾ ಇರುವ ಕಾರಣ ಸರಳವಾಗಿ ಆಚರಿಸಬೇಕಾಗಿ ಬಂದಿರುವ
ಹಿನ್ನಲೆಯಲ್ಲಿ ಎಲ್ಲಾ ಮಹಿಳಾ ಸದಸ್ಯರುಗಳು ಮತ್ತು ನಿರ್ದೇಶಕರುಗಳಿಗೆ ವಿಶಾದವನ್ನು ವ್ಯಕ್ತ ಪಡಿಸುತ್ತ, ಶ್ರೀ ಲಕ್ಷೀ ಮಹಿಳಾ ಸಹಕಾರ ಸಂಘದ ನಿಯಮಗಳ ಸಹಕಾರದಿಂದ ಉತ್ತಮ ವಹಿವಾಟು ಹೊಂದಿದ್ದು, ಮಹಿಳಾ ಸದಸ್ಯರುಗಳು ಸಹ ಬೆಂಬಲವನ್ನು ನೀಡುತ್ತಿದ್ದಾರೆ, ಸಾಸ್ವೇಹಳ್ಳಿ ಭಾಗದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಿರುವ
ಹಿನ್ನಲೆಯಲ್ಲಿ
ಆ ಭಾಗದ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ನಮ್ಮ ಶಾಖೆಯಲ್ಲಿ ಆರ್.ಡಿ ಪಿಗ್ಮಿ
ಡಿಪಾಜಿಟ್ ಮಾಡುವುದರ ಮೂಲಕ ಸದಸ್ಯರುಗಳು ಮುಂದೆ ಬಂದು ನಮ್ಮ ಸಂಘದ ಬೆಳವಣೆಗೆಗೆ ಸಹಕಾರ ಕೋರಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕೆ.ವಿ ಶ್ರೀಧರ್, ಅಧ್ಯಕ್ಷರಾದ ಶ್ರೀಮತಿ ಪ್ರಭಾ ಗುರುದತ್ , ಆ ಸಂಘದ ಮಹಿಳಾ ಸರ್ವ ಸದಸ್ಯರುಗಳು ಸಹ ಭಾಗಿಯಾಗಿದ್ದರು.