ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ನ್ಯಾಮತಿ ಟೌನಿನಲ್ಲಿ ಇರುವ ವೀರಶೈವ ಕಲ್ಯಾಣ ಮಂಟಪದಲ್ಲಿ
ಮಂಗಳವಾರದಂದು ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನ್ಯಾಮತಿ
ಟೌನ್ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಲೊಕೇಶಪ್ಪ ಜಿ.ಎಲ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಂತರ ನೂತನವಾಗಿ ಆಯ್ಕೆಯಾಗಿರುವ ನ್ಯಾಮತಿ ಟೌನ್ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ
ಲೊಕೇಶಪ್ಪ ಜಿ.ಎಲ್ ರವರು ಮಾತನಾಡಿ ನನ್ನನ್ನು ಆಯ್ಕೆ ಮಾಡಲಿಕ್ಕೆ ಸಹಕರಿಸಿದ ನನ್ನ ಪ್ರೀತಿಯ ನಾಯಕರು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರಿಗೂ, ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರಿಗೂ, ಹಾಗೂ ಹೊನ್ನಾಳಿ ಮತ್ತು ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಣ್ಣಕ್ಕಿ
ಬಸವನಗೌಡ, ಹೆಚ್.ಎ
ಗದ್ದಿಗೇಶಣ್ಣ, ಕೊಡಿಕೊಪ್ಪದ ಶಿವಣ್ಣನವರು, ನ್ಯಾಮತಿ ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ, ಕಿರಿಯ ಮುಖಂಡರುಗಳು, ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ನನ್ನ ಎಲ್ಲಾ ಪ್ರೀತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಗೆ ಧನ್ಯಾವಾದಗಳನ್ನು ತಿಳಿಸುತ್ತೇನೆ ಎಂದು ಹೇಳುತ್ತಾ,
ನನಗೆ ಕೊಟ್ಟಿರುವ ಜವಾಬ್ದಾರಿ ದೊಡ್ಡದ್ದು ಕಾಂಗ್ರೆಸ್ ಪಕ್ಷದ ಹಿರಿಯರು,ಕಿರಿಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳ ಸಹಕಾರದಿಂದ ಎಲ್ಲಾ ಸಮುದಾಯದವನ್ನು ಒಟ್ಟಾಗಿ ತಗೆದುಕೊಂಡು ಪ್ರೀತಿ
ವಿಶ್ವಾಸದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.