ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.21 ಶಿವ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹೊನ್ನಾಳಿ, ಇಂದು ಗೊಲ್ಲರಹಳ್ಳಿ ಗ್ರಾಮದಲ್ಲಿ ಇರುವ ತರಳಬಾಳು ಸಮುದಾಯ ಭವನದಲ್ಲಿ 2019-20ನೇ ಸಾಲಿನ ಸರ್ವ ಸದಸ್ಯರ ಹಾಗೂ 20ನೇ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಗಾಟನೆಯನ್ನು ಶ್ರೀ ಕೆ.ಎಂ ಬಸವಲಿಂಗಪ್ಪನವರು ನಾಡಗೀತೆಯೊಂದಿಗೆ ಉದ್ಗಾಟಿಸಿದರು.
ತದಾದನಂತರ ಆ ಬ್ಯಾಂಕಿನ ಕಾರ್ಯದರ್ಶಿಯಾದ ಹೆಚ್.ಎನ್ ರುದ್ರೇಶ್ ರವರು 16/09/2020 2019 ರಂದು ನಡೆದ ಮಹಾಸಭೆಯ ನಿರ್ಣಯಗಳನ್ನು ತಿಳಿಸಿದರು. ಆ ಬ್ಯಾಂಕಿನ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು. 2019-20ನೇ ಸಾಲಿನ ಆಡಿಟ್ ಆದ ಜಮಾ-ಖರ್ಚು, ಲಾಭ-ನಷ್ಟ, ಆಸ್ತಿ- ಜವಾಬ್ದಾರಿ ತಃಖ್ತೆಯನ್ನು ಮಂಡಿಸಿವುದು ಮತ್ತು ಆಡಿಟ್ ವರದಿಯನ್ನು ಸರ್ವ ಸದಸ್ಯರುಗಳಿಗೆ ತಿಳಿಸಿದರು.

ಸಂಘದ ಅಧ್ಯಕ್ಷರಾದ ಕೆ.ಎಂ ಬಸವಲಿಂಗಪ್ಪ ನವರು ಮಾತನಾಡುತ್ತಾ ಶ್ರೀ ತರಳಬಾಳು ಜಗದ್ಗುರು ಶಿವಮೂರ್ತಿ ಶರಣರಿಗೆ ನಮನವನ್ನು ಮಾಡುತ್ತಾ, ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ನಮಸ್ಕಾರಿಸುತ್ತಾ, ಮಾತನ್ನು ಮುಂದುವರಿಸಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಶಿವ ಬ್ಯಾಂಕಿನ ನಿರ್ದೇಶಕರು, ಮತ್ತು ಸರ್ವ ಸದಸ್ಯರುಗಳ ಸಹಕಾರದಿಂದ ನಮ್ಮ ಬ್ಯಾಂಕು ನಡೆತಲಿದ್ದು, ಈ ವರದಿ ಸಾಲಿನಲ್ಲಿ ಸಂಘವು ವಾರ್ಷಿಕ 156.83 ಕೋಟಿ ರೂಗಳ ವಹಿವಾಟುನ್ನು ನಡೆಸಿ, 3.83ಕೋಟಿ ರೂ, ಒಟ್ಟು ಆದಾಯವನ್ನು ಗಳಿಸಿರುತ್ತದೆ. ಇದರಲ್ಲಿ ಸಂಘವು ಪ್ರಸಕ್ತ ಸಾಲಿಗೆ ರೂ 44,14,148/- ಗಳ ನಿವ್ವಳ ಲಾಭಗಳಿಸಿರುತ್ತದೆ. ಸಂಘದ ಸಾಮಾನ್ಯ ಸದಸ್ಯರು ಮರಣ ಹೊಂದಿದಲ್ಲಿ ಸದಸ್ಯರ ಕ್ಷೇಮ ನಿಧಿಯಿಂದ 4,000/-ರೂಗಳನ್ನು ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 44 ಜನ ಮರಣ ಹೊಂದಿದ್ದು, ಸದಸ್ಸಯರಿಗೆ 1.73,000ಗಳನ್ನು ಪಾವತಿಸಿದೆ ಎಂದು ಹೇಳುತ್ತಾ ಮಾತನ್ನು ಮುಗಿಸಿದರು.

ಈ ಕಾರ್ಯಕ್ರಮದಲ್ಲಿ;- ಅಧ್ಯಕ್ಷರಾದ ಕೆ.ಎಂ ಬಸವಲಿಂಗಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಎಸ್.ಎಂ ಶಕುಂತಲಾ, ನಿರ್ದೇಶಕರುಗಳಾದ ಶ್ರೀ ಎಸ್ ನಾಗರಾಜಪ್ಪ, ಶ್ರೀ ಎಂ.ಜಿ ಬಸವರಾಜಪ್ಪ, ಶ್ರೀ ಎಂ.ಸಿ ನಾಗೇಂದ್ರಪ್ಪ, ಶ್ರೀ ಕೆ. ಸಿದ್ದೇಶ್ವರಪ್ಪ, ಶ್ರೀ ಆರ್.ಸಿ ಶಂಕರಗೌಡ, ಶ್ರೀ ಜೆ ಶ್ರೀಕಾಂತ್, ಶ್ರೀ ಪಿ.ಬಿ ಶೈಲೇಶ್, ಶ್ರೀ ಕೆ.ಎಸ್ ಶಿವಕುಮಾರ್, ಶ್ರೀ ಎಂ.ಆರ್ ವಿಕಾಸ್, ಶ್ರೀಮತಿ ಕೆ.ಜಿ ಮಂಜುಳಾ, ಶ್ರೀ ಎನ್ ಕೃಷ್ಣಾನಾಯ್ಕ್, ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಬ್ಯಾಂಕಿನ ಎಲ್ಲಾ ಸರ್ವಸದಸ್ಯರುಗಳು, ಮತ್ತು ಕಾರ್ಯದರ್ಶಿ ಹೆಚ್.ಎನ್ ರುದ್ರೇಶ್, ಬ್ಯಾಂಕಿನ ಎಲ್ಲಾ ಸಿಬ್ಬಂದಿ ವರ್ಗದವರು ಸಹ ಬಾಗಿಯಾಗಿದ್ದರು

Leave a Reply

Your email address will not be published. Required fields are marked *