ದಾವಣಗೆರೆ ಡಿ.21
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ
ದಾವಣಗೆರೆ ಇವರ ಸಂಯುಕ್ತಾಶ್ರದಲ್ಲಿ ಡಿ.22 ರಂದು ಬೆಳಿಗ್ಗೆ 11
ಗಂಟೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಳೇ
ನ್ಯಾಯಾಲಯದ ಸಂಕೀರ್ಣ, ಎ.ಡಿ.ಆರ್ ಕಟ್ಟಡ ದಾವಣಗೆರೆ ಇಲ್ಲಿ
‘ಸಂತ್ರಸ್ತರ ಪರಿಹಾರ ನಿಧಿ ಯೋಜನೆ’ ಕಾನೂನು ಅರಿವು
ಮತ್ತು ‘ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು’ ಕೈಪಿಡಿ
ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು
ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ
ಸಾಬಪ್ಪ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ
ಎನ್.ಟಿ.ಮಂಜುನಾಥ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ನೆರಳು ಬೀಡಿ ಕಾರ್ಮಿಕರ
ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ, ಕರ್ನಾಟಕ ಸ್ಲಂ
ಜನಾಂದೋಲದ ಪ್ರಧಾನ ಕಾರ್ಯದರ್ಶಿಗಳಾದ ರೇಣುಕಾ
ಯಲ್ಲಮ್ಮ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ
ಸದಸ್ಯರು ಹಾಗೂ ವಕೀಲರಾದ ಅರುಣಕುಮಾರ್ ಎಲ್.ಹೆಚ್
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ
ತಿಳಿಸಿದೆ.