ದಾವಣಗೆರೆ ಡಿ.22
  2020-21ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು
ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿ
ಉದ್ಯಮಶೀಲತೆ ಮತ್ತು  ಮತ್ತು ಜೀವನೋಪಾಯ

ಇಲಾಖೆಯಡಿಯಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ
ಯೋಜನೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ
ಉಪಯೋಜನೆ(ಎಸ್‍ಸಿಪಿ/ಟಿಎಸ್‍ಪಿ)ಯಡಿ ಪ.ಜಾತಿ/ಪ.ಪಂಗಡದ 18 ರಿಂದ 35
ವಯೋಮಾನದೊಳಗಿನ ನಿರುದ್ಯೋಗಿ
ಯುವಕ/ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು
ಉಚಿತ ತರಬೇತಿ ನೀಡಲಾಗುವುದು.
ಎಸ್.ಎಸ್.ಎಲ್.ಸಿ/ಐ.ಟಿ.ಐ/ಡಿಪ್ಲೋಮ/ಬಿ.ಎ ಪಾಸ್ ಆಗಿರುವ ಅಭ್ಯರ್ಥಿಗಳಿಗೆ
2 ತಿಂಗಳು ಅವಧಿಯ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್,
ಸಿಎನ್‍ಸಿ ಆಪರೇಟರ್ ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮರ್, ಕನ್ವೆನ್ಶಷನಲ್
ಟರ್ನಿಂಗ್ ಮಷಿನ್ ಆಪರೇಟರ್, ಕನ್ವೆನ್ಶಷನಲ್ ಟರ್ನಿಂಗ್ ಮಷಿನ್
ಆಪರೇಟರ್, ಮಿಲ್ಲಿಂಗ್ ಮಷಿನ್ ಆಪರೇಟರ್,   ಸರ್ಫೇಸ್ ಗ್ರೈಂಡಿಂಗ್
ಮಷಿನ್ ಆಪರೇಟರ್, ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್
ಇಂಜಿನಿಯರ್ ತರಬೇತಿ ಕಾರ್ಯಕ್ರಮವನ್ನು ಉಚಿತವಾಗಿ
ನಡೆಸಲಾಗುವುದು. ತರಬೇತಿಯ ಅವಧಿಗೆ ಶಿಷ್ಯವೇತನ
ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.31 ಕೊನೆಯ
ದಿನವಾಗಿರುತ್ತದೆ.
 ಈ ತರಬೇತಿಯು ಮುಗಿದ ನಂತರ ಉದ್ಯೋಗಾವಕಾಶಕ್ಕೆ
ಮಾರ್ಗದರ್ಶನ ನೀಡಲಾಗುವುದು. ಅರ್ಜಿ ಸಲ್ಲಿಸಲು ಹಾಗೂ
ಹೆಚ್ಚಿನ ವಿವರಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ, 22 ಸಿ &ಚಿmಠಿ; ಡಿ ಕೆಐಎಡಿಬಿ,
ಇಂಡಸ್ಟ್ರಿಯಲ್ ಏರಿಯಾ ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ,
ಹರಿಹರ ಪೊ.ನಂ: 08192-243937, 7019600676, 8711913947,
8884488202, 9742430685 ನ್ನು ಸಂಪರ್ಕಿಸಬಹುದೆಂದು ಸರ್ಕಾರಿ
ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ
ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *