ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಎ.ಪಿ.ಎಂ.ಸಿ ಪಕ್ಕದ ವಿದ್ಯಾನಗರದಲ್ಲಿ ಇರುವ ಏಸು ರಕ್ಷಕ ದೇವಾಲಯದಲ್ಲಿ ನಿನ್ನೆ ಏಸು ಕ್ರಿಸ್ಥರ ಹುಟ್ಟ ಹಬ್ಬದ ಪ್ರಯುಕ್ತ ಫಾದರ್ ಗಳ ನೇತೃತ್ವದಲ್ಲಿ ದಿನಾಂಕ 24-12-2020ರಂದು ಆಡಂಬರದ ಬಲಿಪೂಜೆ ಪ್ರಾರ್ಥನೆಯೊಂದಿಗೆ ರಾತ್ರಿ 7;30ರ ಸಮಯಕ್ಕೆ ಆರಂಭಿಸಿ 9 ಗಂಟೆಗೆ ಸರಿಯಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಕ್ತಾಯಕೊಂಡಿತು.
ತದಾದನಂತರ ಏಸು ಸ್ವಾಮಿಯ ಧಾರ್ಮಿಕ ಗುರುಗಳು, ಏಸು ಕ್ರಿಸ್ಥ ಸ್ವಾಮಿಯ ಎಲ್ಲಾ ಭಕ್ತಾದಿಗಳಿಗೆ ಕ್ರಿಸ್ ಮಸ್ ಹಬ್ಬದ ಶುಭಾಷಯಗಳನ್ನು ಕೋರಿದರು.


ನಂತರ ಮಾತನಾಡಿದ ಲೂರ್ದ್ ಸ್ವಾಮಿ ಕೊರೋನಾ ವೈರಸ್ ಇರುವ ಹಿನ್ನಲೆಯಲ್ಲಿ ಈ ಹಬ್ಬವನ್ನು ಸರಳವಾಗಿ ಆಚರಿಸಬೇಕಾಗಿ ಬಂದಿದೆ, ಆದ ಕಾರಣ ಏಸು ಕ್ರಿಸ್ಥರು ಆಶೀರ್ವಾದದಿಂದ ಕೊರೋನಾ ರೋಗವು ಈ ದೇಶದ ಪ್ರತಿಯೊಬ್ಬರಿಗೂ ಬಾರದಂತೆ ಕಾಪಾಡಲಿ ಎಂದು ಏಸು ಕ್ರಿಸ್ಥರ ಪ್ರಾರ್ಥನೆಯಲ್ಲಿ ಏಸು
ಸ್ವಾಮಿಗೆ ಬೇಡಿಕೊಂಡರು.

ಈ ಕಾರ್ಯಕ್ರಮದಲ್ಲಿ ಫಾದರ್ ಗಳಾದ ಶ್ರೀ ಲೂರ್ದ್ ಸ್ವಾಮಿ, ಚೇತನ್ ಸ್ವಾಮಿ, ಆಂಥೋನಿ ಸ್ವಾಮಿಗಳಿ ಮತ್ತು ಏಸು ಕ್ರಿಸ್ಥರ ಭಕ್ತಾಧಿಗಳು ಭಾಗಿಯಾಗಿ ಈ ಧಾರ್ಮಿಕ ಕಾರ್ಯವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *