*ಹೊನ್ನಾಳಿ ತಾಲ್ಲೂಕಿನಲ್ಲಿ 147 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 41 ಟೇಬಲ್‍ಗಳು, 45 ಮೇಲ್ವಿಚಾರಕರು, 90 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 135 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 253 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 73 ಟೇಬಲ್‍ಗಳು, 80 ಮೇಲ್ವಿಚಾರಕರು, 161 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 241 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಗಳೂರು ತಾಲ್ಲೂಕಿನಲ್ಲಿ 172 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 51 ಟೇಬಲ್‍ಗಳು, 56 ಮೇಲ್ವಿಚಾರಕರು, 112 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 168 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 368 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತ ಎಣಿಕೆಗೆ 100 ಟೇಬಲ್‍ಗಳು, 110 ಮೇಲ್ವಿಚಾರಕರು, 220 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 330 ಸಿಬ್ಬಂದಿ ನೇಮಿಸಲಾಗಿದೆ. ಹರಿಹರ ತಾಲ್ಲೂಕಿನಲ್ಲಿ 151 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 42 ಟೇಬಲ್‍ಗಳು, 46 ಮೇಲ್ವಿಚಾರಕರು, 92 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 138 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 93 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 24 ಟೇಬಲ್‍ಗಳು, 26 ಮೇಲ್ವಿಚಾರಕರು, 57 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 83 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *