ಮತಗಳ ಎಣಿಕೆ ಮುಕ್ತಾಯ ಬಳಿಕ ಅಭ್ಯರ್ಥಿಗಳ ನಡುವೆ ಸಮಾನ ಮತಗಳು ಇರುವುದು ಕಂಡುಬಂದಲ್ಲಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ) ನಿಯಮ 1993 (73) ಅನ್ವಯ ಚುನಾವಣಾಧಿಕಾರಿಯು ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಆಯ್ಕೆಯನ್ನು ನಿರ್ಣಯಿಸುವರು. ಒಂದು ವೇಳೆ ಮತಪತ್ರದಲ್ಲಿ ಗುರುತು ಮಾಡದೇ ಇರುವುದು, ಖಾಲಿ ಜಾಗದ ಮೇಲೆ ಗುರುತು ಮಾಡಿದಲ್ಲಿ, ಆಯ್ಕೆ ಮಾಡಬೇಕಾಗಿರುವ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಲ್ಲಿ, ಮತದಾರರನ್ನು ಗುರುತಿಸಿದ್ದಲ್ಲಿ, ಮತಪತ್ರವನ್ನು ವಿರೂಪಗೊಳಿಸಿದ್ದಲ್ಲಿ, ಮತಪತ್ರ ನೈಜವಾದುದಲ್ಲ ಎಂದು ಕಂಡುಬಂದಲ್ಲಿ ಅಂತಹ ಮತಪತ್ರವನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.