ಕುರಿತು ತರಬೇತಿ

ದಾವಣಗೆರೆ ಡಿ.30
   ನಮ್ಮ ಮುಖ್ಯ ಆಹಾರ ಬೆಳೆಯಾದ ಭತ್ತದ ಕುರಿತಾಗಿ
‘ಪರಿಸರ ಸ್ನೇಹಿ ವಿಷಮುಕ್ತ ಭತ’್ತ ಎನ್ನುವ ವಿಷಯದ ಬಗ್ಗೆ
ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ
ಕೃಷಿ ಕೇಂದ್ರದಲ್ಲಿ 2021 ರ ಜನವರಿ 04 ರಂದು ಒಂದು ದಿನದ
ತರಬೇತಿ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ನುರಿತ
ಹಾಗೂ ಅನುಭವಿ ವಿಜ್ಞಾನಿಗಳು, ರೈತರೊಂದಿಗೆ ಸಂವಾದ
ನಡೆಸಲಿದ್ದಾರೆ.
ಆಧುನಿಕ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವ
ತವಕದಲ್ಲಿ ಅವೈಜ್ಞಾನಿಕ ಹಾಗೂ ಶಿಫಾರಸ್ಸಿಗಿಂತ ಹೆಚ್ಚು
ರಸಗೊಬ್ಬರ ಮತ್ತು ಪೀಡೆನಾಶಕಗಳ ಬಳಕೆಯಿಂದಾಗಿ,
ಕೃಷಿಗೆ ಮಾಡುವ ವೆಚ್ಚವು ಅಧಿಕವಾಗಿ ಪಡೆಯುವ
ಲಾಭಾಂಶ ಕಡಿಮೆಯಾಗಿದೆ. ಆಹಾರವು
ವಿಷಯುಕ್ತವಾಗುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೆ
ಕಾರಣವಾಗುತ್ತಿದೆ. ಈ ದಿಶೆಯಲ್ಲಿ ಪ್ರಸ್ತುತವಾಗಿ
ಅನುಸರಿಸುತ್ತಿರುವ ಆಧುನಿಕ ಕೃಷಿಯಲ್ಲಿ ಬದಲಾವಣೆಯ
ಅವಶ್ಯಕತೆಯಿದ್ದು, ಜೈವಿಕ ವಿಘಟನೆಹೊಂದದ
ರಾಸಾಯನಿಕಗಳನ್ನು ಬಳಸದೇ ಖರ್ಚನ್ನು ಮಿತಗೊಳಿಸಿ,
ಪರಿಸರ ಸ್ನೇಹಿಯಾಗಿ ವಿಷಮುಕ್ತ ಆಹಾರ ಪಡೆಯುವುದು
ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ
ಏರ್ಪಡಿಸಲಾಗಿದೆ.

     ಪ್ರಯುಕ್ತ ಆಸಕ್ತಿಯುಳ್ಳ  ರೈತ ಬಾಂಧವರು ಜಿಲ್ಲಾ
ಕೃಷಿ ತರಬೇತಿ ಕೇಂದ್ರ, ಕಾಡಜ್ಜಿಯ ಕಚೇರಿಯಲ್ಲಿ ತಮ್ಮ
ಹೆಸರನ್ನು ಜ.04 ರೊಳಗೆ ನೋಂದಾಯಿಸಿಕೊಳ್ಳುವುದು
ಅಥವಾ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ
ಕೇಂದ್ರ, ಕಾಡಜ್ಜಿ ಇವರ ದೂ.ಸಂ: 8277931242 ಅಥವಾ
8277928964 ರಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಜಂಟಿ ಕೃಷಿ
ನಿರ್ದೇಶಕ ಶ್ರೀನಿವಾಸ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *