ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಹೊನ್ನಾಳಿ ತಾಲೂಕಿನ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಇದರ ಅಧ್ಯಕ್ಷತೆಯನ್ನು ಡಿ.ಜಿ ಶಾಂತನಗೌಡ್ರುರವರು ಮತ್ತು ಎಂ.ಎಲ್.ಸಿ ಪ್ರಸನ್ನಕುಮಾರ್ ಇವರುಗಳ ನೇತೃತ್ವದಲ್ಲಿ ಜ್ಯೋತಿಯನ್ನು ಹಚ್ಚುವುದರ ಮೂಲಕ ಉದ್ಗಾಟನೆಯನ್ನು ಮಾಡಿದರು.
ಶಿವಮೊಗ್ಗದ ಎಂ.ಎಲ್.ಸಿ ಆರ್ ಪ್ರಸನ್ನಕುಮಾರ್ ಮಾತನಾಡಿ 73,74 ಸಂವಿದಾನ ತಿದ್ದುಪಡ್ಡಿ ಮಾಡಿ ಶೇಕಡಾ 50ರಿಂದ 60% ಮಹಿಳೆಯರು ಆಯ್ಕೆಯಾಗಲಿಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಆಯ್ಕೆಯಾದ ವಿಧಾನಸಭೆ ಶಾಸಕರಗಿಂತ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಹೆಚ್ಚಿಗೆ ಅಧಿಕಾರ ಸಿಗುತ್ತದೆ. ಬಿಜೆಪಿಯವರಯ 56 ಇಂಚು ನಮ್ಮ ಎದೆ ಇದೆ ಎಂದು ಹೇಳುತ್ತಾರಲ್ಲಾ ಅವರಿಗೆ ಒಳ್ಳೆಯ ಹೃದಯ ಬೇಕಾಗುತ್ತದೆ, 1964ರಲ್ಲಿ ಗೋಹತ್ಯೆ ಮಸೂದೆಯನ್ನು ಕಾಂಗ್ರೆಸ್ ಪಕ್ಷ ತಂದಿದೆ. ರಾಜ್ಯದಲ್ಲಿ ಇವರು ಹಣವನ್ನು ಕೈಯಿಂದ ದೋಚ್ಚುತ್ತಿಲ್ಲ, ಜೆಸಿಬಿಯಿಂದ ಹಣವನ್ನು ಲೂಟಿಮಾಡುತ್ತಿದ್ದಾರೆ ಎಂದರು. ಮೋದಿಯ ಹತ್ತಿರ ಹಣ ಇಲ್ಲ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ ಇದು ನಿಜ, ಆದರೆ ಅವರ ಹಣ ಅಂಬಾನಿ ಮತ್ತು ಆಧಾನಿಯವರ ಹತ್ತಿರ ಹಣ ಇದೆ, ಇದು ವಿಪರ್ಯಾಸದ ಸಂಗತಿ ಎಂದು ಹೇಳುತ್ತಾ ಮಾತನ್ನು ಮುಗಿಸಿದರು.
ನಂತರ ಡಿ.ಜಿ ಶಾಂತನಗೌಡ್ರುರವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಈ ಮಹಿಳೆಯರು ಗ್ರಾಮ ಪಂಚಾಯಿತಿಯ ನೂರಾರು ಸದಸ್ಯರುಗಳಾಗಿ ಆಯ್ಕೆಯಾಗಲ್ಲಿಕ್ಕೆ ನಮ್ಮ ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಮಂತ್ರಿಯಾದ ದಿವಂಗತ// ಇಂದಿರಾ ಗಾಂಧಿಯವರೇ ಕಾರಣ. ಹೊನ್ನಾಳಿ ತಾಲೂಕುಗಳಲ್ಲಿ 183 ಗ್ರಾಮ ಪಂಚಾಯಿತಿ ಸದಸ್ಯರುಗಳು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದರು. ಆದರೆ ಈಗ 225 ಸದಸ್ಯರುಗಳು ಆಯ್ಕೆಯಾಗಿದ್ದಾರೆ ಎಂದು ಇಂದು ಮಾಹಿತಿ ತಿಳಿದು ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಪ್ರತಿಯೊಂದು ವಿಧಾನಸಭೆಗೆ ಗ್ರಾಮ ಪಂಚಾಯಿತಿ ಚುನಾವಣೆ ಮಾಡಲ್ಲಿಕ್ಕೆ 25ಲಕ್ಷರೂಗಳನ್ನು ಕೊಟ್ಟಿದ್ದಾರೆ, ಆದರೆ ಇಲ್ಲಿನ ಶಾಸಕ ಬಿಜೆಪಿಯ 300 ಜನಗಳಿಗೆ 10,000 ಸಾವಿರರೂಗಳಂತೆ ಕೊಟ್ಟು ಉಳಿದ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ ಎಂದು ಅಪಾಧಿಸಿದರು. ನಮ್ಮ ಪಕ್ಷದಿಂದ ಗೆದ್ದ ಗ್ರಾಮ ಪಂಚಾಯಿತಿ ಪುರುಷ ಸದಸ್ಯರುಗಳಿಗಿಂತ ಅತಿ ಹೆಚ್ಚು ಮಹಿಳಾ ಸದಸ್ಯರುಗಳು ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದ ವತಿಯಿಂದ 1ರೂಗಳು
ಹಣವನ್ನು ಸಹ ಅವರುಗಳಿಗೆ ಕೊಟ್ಟಿಲ್ಲ. ಆದರೂ ಇಷ್ಟೋಂದು ಸದಸ್ಯರುಗಳು ಆಯ್ಕೆಯಾಗಿರುವುದು ಸಂತೋಷದ ವಿಷಯ, ನಿಮ್ಮಗಳಿಗೆ ಬಿಜೆಪಿಯವರು ಏನಾದರು ಅಧಿಕಾರದ ಆಸೆಯನ್ನು ತೋರಿಸಿ ಕಿರುಕುಳ ಕೊಟ್ಟರೆ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ
ರೀತಿಯಲ್ಲಿ ಒನಕೆ ಮತ್ತು ಕತ್ತಿಯನ್ನು ಇಡಿದು ಹೊರಾಟವನ್ನು ಮಾಡಿ, ನಾವುಗಳು ನಿಮ್ಮ ಹಿಂದೆ ಸದಾ ಇರುತ್ತೇವೆ ಎಂದು ಅವರಿಗೆ ಧೈರ್ಯವನ್ನು ತುಂಬುತ್ತಾ ಮಾತನ್ನು ಮುಗಿಸಿದರು.
ನಂತರ 225 ಸದಸ್ಯರುಗಳಿಗೆ ಹಾರವನ್ನು ಹಾಕಿ, ಶಾಲನ್ನು ಒದಿಸಿ ಸಿಹಿಯ ಬಾಕ್ಸ್ ಅನ್ನು ಕೊಡುವುದರ ಮೂಲಕ ಎಲ್ಲಾ ಸದಸ್ಯರುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗ್ಯದ ವರು ಡಿ.ಜಿ ಶಾಂತನ ಗೌಡ್ರು ಮಾಜಿ ಶಾಸಕರು, ಎಂಎಲ್ ಸಿ ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪ, ಈಶ್ಟರ್ ನಾಯ್ಕ್ ,ತಾಲೂಕ ಅಧ್ಯಕ್ಷರುಗಳಾದ ಸಣ್ಣಕ್ಕಿ ಬಸನಗೌಡ, ಹೆಚ್, ಎ ಗದ್ದಿಗೇಶಣ್ಣ, ಎಂ ರಮೇಶ್ ,ಎಂ ಸಿದ್ದಪ್ಪ, ಬಿ ಸಿದ್ದಪ್ಪ, ಉಮಾಪತಿ, ಅಬ್ಬಿದ್ ಅಲಿಖಾನ್, ಆರ್ ನಾಗಪ್ಪ, ಜಬ್ಬರ್ ಖಾನ್, ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳು, ಮಹಿಳಾ ಸದಸ್ಯರುಗಳು, ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳು ಸಹ ಭಾಗಿಯಾಗಿದ್ದರು.