ದಾವಣಗೆರೆ ಜ.11
 ವಿಕಲಚೇತನರ ಗ್ರಾಮೀಣ ಪುನರ್ವಸತಿ
ಯೋಜನೆಯಡಿ ಹರಿಹರ ತಾಲ್ಲೂಕಿನಲ್ಲಿ ವಿವಿಧೋದ್ದೇಶ
ಪುನರ್ವಸತಿ ಕಾರ್ಯಕರ್ತರ (ಒಖW) ಹುದ್ದೆ ಖಾಲಿ ಇದ್ದು,
ಮಾಸಿಕ ರೂ. 12,000/-ಗಳ ಗೌರವಧನ ಆಧಾರದಲ್ಲಿ
ನೇಮಕ ಮಾಡಿಕೊಳ್ಳಲು ಅರ್ಹ ವಿಕಲಚೇತನ
ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
   ಅರ್ಜಿ ಸಲ್ಲಿಸಬಯಸುವ ವಿಕಲಚೇತನರು 18 ರಿಂದ 45 ವರ್ಷದ
ವಯೋಮಾನದವರಾಗಿದ್ದು,
ಪದವೀಧರರಾಗಿರಬೇಕು. ಕಂಪ್ಯೂಟರ್ ಜ್ಞಾನವುಳ್ಳವರಿಗೆ
ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಜ.20 ಕೊನೆಯ
ದಿನವಾಗಿರುತ್ತದೆ. ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ
ಅಧಿಕಾರಿಗಳ ಕಛೇರಿ, ಶಂಕರಲೀಲಾ ಗ್ಯಾಸ್ ಏಜೆನ್ಸಿ ಹತ್ತಿರ, ಎಂ.ಸಿ.ಸಿ.
‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ: 08192-263939 ನ್ನು
ಸಂಪರ್ಕಿಸಬಹುದು.
 ಅರ್ಜಿ ನಮೂನೆ, ಎರಡು ಸ್ಟ್ಯಾಂಪ್ ಸೈಜ್ ಅಳತೆಯ
ಭಾವಚಿತ್ರ, ಸ್ಥಳೀಯ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ
ನಿವಾಸಿಯಾಗಿರಬೇಕು. ಪದವೀಧರರಾಗಿದ್ದು ತತ್ಸಮಾನ
ಪದವಿ ಅಂಕಪಟ್ಟಿಗಳು, ಸಕ್ಷಮ ಪ್ರಾಧಿಕಾರದಿಂದ ಪಡೆದ
ವಾಸಸ್ಥಳ ದೃಢೀಕರಣಪತ್ರ, ವಿಕಲಚೇತನರ
ಗುರುತಿನಚೀಟಿ (ಯು.ಡಿ.ಐ.ಡಿ. ಕಾರ್ಡ್), ಜಾತಿ &ಚಿmಠಿ; ಆದಾಯ
ಪ್ರಮಾಣಪತ್ರ, ಕಂಪ್ಯೂಟರ್ ಅನುಭವಪತ್ರ ,ಆಧಾರ ಕಾರ್ಡ್

ಸಲ್ಲಿಸಬೇಕೆಂದು ಜಿಲ್ಲಾ ಅಂಗವಿಕಲರು ಹಾಗೂ ಹಿರಿಯ
ನಾಗರೀಕರ ಕಲ್ಯಾಣಾಧಿಕಾರಿ ಜಿ.ಎಸ್ ಶಶಿಧರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *