ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆÀ ಸಮಿತಿಯಿಂದ ಆಕಸ್ಮಿಕ
ದಾಳಿಗೆ ನಿರ್ಧಾರ- ಮಮತಾ ಹೊಸಗೌಡರ್
ದಾವಣಗೆರೆ ಜ. 22
ಲಿಂಗಾನುಪಾತ ಅಸಮತೋಲನ ನಿವಾರಣೆ, ಕಾನೂನು ಬಾಹಿರವಾಗಿ
ಪ್ರಸವಪೂರ್ವ ಭ್ರೂಣ ಲಿಂಗಪತ್ತೆ ಮುಂತಾದ ಅಕ್ರಮ
ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿನ ಅಲ್ಟ್ರಾಸೌಂಡ್
ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಜಿಲ್ಲಾ ಸಮಿತಿಯಿಂದ ಆಕಸ್ಮಿಕ ದಾಳಿ ನಡೆಸಿ
ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪಿಸಿ &ಚಿmಠಿ; ಪಿಎನ್ಡಿಟಿ ಸಲಹಾ ಸಮಿತಿಯ
ಅಧ್ಯಕ್ಷರಾಗಿರುವ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್
ಹೇಳಿದರು.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪಿಸಿ &ಚಿmಠಿ;
ಪಿಎನ್ಡಿಟಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,
ಸಮಿತಿಯು ಕೇವಲ ಸ್ಕ್ಯಾನಿಂಗ್ ಸೆಂಟರ್ಗಳ ನೊಂದಣಿ,
ಉಪಕರಣಗಳ ಅಳವಡಿಕೆಗೆ ಪರವಾನಗಿ, ನವೀಕರಣ ಕಾರ್ಯಕ್ಕೆ
ಮಾತ್ರ ಸೀಮಿತವಾಗಬಾರದು. ಲಿಂಗಾನುಪಾತ ಅಸಮತೋಲನ
ನಿವಾರಣೆ, ಕಾನೂನು ಬಾಹಿರವಾಗಿ ಪ್ರಸವಪೂರ್ವ ಭ್ರೂಣ ಲಿಂಗಪತ್ತೆ,
ಅಕ್ರಮ ಗರ್ಭಪಾತ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳ
ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಹಾಗೂ
ನರ್ಸಿಂಗ್ ಹೋಂಗಳ ಮೇಲೆ ಜಿಲ್ಲಾ ಸಮಿತಿಯಿಂದ ಆಕಸ್ಮಿಕ ದಾಳಿ ನಡೆಸಿ
ಪರಿಶೀಲಿಸಲಾಗುವುದು. ಸ್ಕ್ಯಾನಿಂಗ್ ಸೆಂಟರ್ಗಳಿಗೆ ಪರವಾನಗಿ
ನೀಡುವಾಗ, ಅಲ್ಲಿ ಸಾರ್ವಜನಿಕರಿಗೆ ಇರುವ ಸೌಲಭ್ಯಗಳು, ಕಟ್ಟಡದ
ಸ್ಥಿತಿಗತಿ, ವಾಹನ ಪಾರ್ಕಿಂಗ್ಗೆ ಸ್ಥಳಾವಕಾಶ, ವೀಲ್ಚೇರ್ಗಳ ವ್ಯವಸ್ಥೆ
ಮುಂತಾದ ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಸಭೆಗೆ
ಮಂಡಿಸಬೇಕು. ಇನ್ನು ಮುಂದೆ, ಸಮಿತಿಯು ಕಾಯ್ದೆಯ
ಪರಿಣಾಮಕಾರಿ ಅನುಷ್ಠಾನಕ್ಕೆ ಸಮಿತಿಯ ಸದಸ್ಯರೆಲ್ಲರೂ
ಶ್ರಮಿಸಬೇಕು. ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2001 ರ
ಜನಗಣತಿಯಲ್ಲಿ 1000 ಗಂಡು ಮಕ್ಕಳಿಗೆ 946 ಹೆಣ್ಣು, 2011 ರ
ಜನಗಣತಿಯಲ್ಲಿ 948 ಹೆಣ್ಣು ಮಕ್ಕಳ ಅನುಪಾತ ದಾಖಲಾಗಿದೆ. ಅಂದರೆ
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆ ಇದೆ ಎಂಬುದು
ದಾಖಲಾಗಿದೆ. ಕಾನೂನು ಬಾಹಿರವಾಗಿ ಪ್ರಸವಪೂರ್ವ ಭ್ರೂಣಲಿಂಗಪತ್ತೆ,
ಅಕ್ರಮವಾಗಿ ಗರ್ಭಪಾತ ಮಾಡಿಸುವುದು ಸೇರಿದಂತೆ ವಿವಿಧ
ಕಾರಣಗಳಿಂದ ಲಿಂಗಾನುಪಾತದಲ್ಲಿ ಅಸಮತೋಲನವಾಗಿರುವ
ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಪಿಸಿ &ಚಿmಠಿ; ಪಿಎನ್ಡಿಟಿ ಕಾಯ್ದೆಯನ್ನು
ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಲಿಂಗಾನುಪಾತದ
ಕೊರತೆಯನ್ನು ನೀಗಿಸಲು ಸಮಿತಿಯ ಎಲ್ಲ ಸದಸ್ಯರು
ಶ್ರಮಿಸಬೇಕು. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ
ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಿ, ಕಾಯ್ದೆ ಕುರಿತು
ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಮತಾ ಹೊಸಗೌಡರ್
ಹೇಳಿದರು.
ಸಮಿತಿಯ ಎನ್ಜಿಒ ಸದಸ್ಯ ಶ್ರೀಕಾಂತ್ ಮಾತನಾಡಿ, ಜಿಲ್ಲೆಯ ಹಲವಾರು
ಖಾಸಗಿ ನರ್ಸಿಂಗ್ಹೋಂ ಗಳಲ್ಲಿ ಆಗುವ ಶಿಶು ಜನನ ಅಥವಾ ಮರಣದ
ಬಗ್ಗೆ ದಾಖಲು ಸರಿಯಾಗಿ ಆಗುತ್ತಿಲ್ಲ. ಗರ್ಭಿಣಿಯರ ನೊಂದಣಿ
ವಿಷಯದಲ್ಲಿ ಬಿಪಿಎಲ್ ಕುಟುಂಬಗಳ ನೊಂದಣಿ ಮಾತ್ರ ಆಗುತ್ತಿದ್ದು,
ಎಪಿಎಲ್ ಕುಟುಂಬಗಳ ನೊಂದಣಿ ಆಗುತ್ತಿಲ್ಲ. ಪ್ರತಿಯೊಬ್ಬ
ತಾಯಂದಿರಿಗೂ ತಾಯಿಕಾರ್ಡ್ ನೀಡಲಾಗುತ್ತಿಲ್ಲ. ಹೀಗಾಗಿ ಶಿಶು ಜನನ,
ಮರಣದ ಅಂಕಿ-ಅಂಶದಲ್ಲಿ ವ್ಯತ್ಯಾಸವಾಗುತ್ತಿದೆ. ಖಾಸಗಿ ನರ್ಸಿಂಗ್
ಹೋಂಗಳಲ್ಲಿ ಕೆಲವೆಡೆ ಶಿಶು ಜನನದ ಬಗ್ಗೆ ವರದಿಯನ್ನು ಆಯಾ
ನಗರ, ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಸಲ್ಲಿಸದೆ, ಜನನ
ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ದಾಖಲೆ ಸೃಷ್ಟಿಸಲು
ಮುಂದಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಶಿಶು
ಮರಣ ಸಂಭವಿಸಿದಾಗ ಪ್ರಕರಣ ದಾಖಲಿಸದೆ, ಸ್ಮಶಾನದಲ್ಲಿ
ಕದ್ದುಮುಚ್ಚಿ ಅಂತ್ಯಸಂಸ್ಕಾರ ನಡೆಯುತ್ತವೆ. ಹೀಗಾಗಿ
ಗರ್ಭಿಣಿಯರ ನೊಂದಣಿ ಸಂಖ್ಯೆ, ಶಿಶು ಜನನ, ಗರ್ಭಪಾತದ ಅಂಕಿ-
ಅಂಶಗಳು ಒಂದಕ್ಕೊಂದು ತಾಳೆಯಾಗದಿರುವುದರಿಂದ
ಲಿಂಗಾನುಪಾತದಲ್ಲಿ ಅಸಮತೋಲನ ಕಂಡುಬರುತ್ತಿದೆ ಎಂದರು.
ಇದಕ್ಕೆ ದನಿಗೂಡಿಸಿದ ಸಮಿತಿಯ ಇನ್ನೋರ್ವ ಸದಸ್ಯ ಡಾ. ಕಾಳಪ್ಪ
ಅವರು, ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಕೊರತೆ ಇರುವ
ಸಾಧ್ಯತೆಗಳು ಕಡಿಮೆ, ಆದರೆ ಗರ್ಭಿಣಿಯರ ನೊಂದಣಿ, ಶಿಶು
ಜನನ, ಮರಣದ ನಿಖರ ದಾಖಲಾತಿಯಲ್ಲಿ ಆರೋಗ್ಯ ಇಲಾಖೆ
ಜವಾಬ್ದಾರಿಯುತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಉಪವಿಭಾಗಾಧಿಕಾರಿಗಳು ಪ್ರತಿಕ್ರಿಯಿಸಿ, ಕಳೆದ 2019 ರ ಜನವರಿ 01 ರಿಂದ
2020 ರ ಜ. 01 ರವರೆಗೆ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ
ದಾಖಲಾಗಿರುವ ಗರ್ಭಿಣಿಯರ ಸಂಖ್ಯೆ, ಶಿಶು ಜನನ, ಮರಣ,
ಗರ್ಭಪಾತ ಮುಂತಾದ ವಿವರವುಳ್ಳ ಸಮಗ್ರ ಅಂಕಿ-ಅಂಶವನ್ನು
ಫೆಬ್ರವರಿ 10 ರೊಳಗೆ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು
ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಿತಿಯ ಸದಸ್ಯರಾದ ವಕೀಲ ವಿ.ಆರ್. ರವಿಕುಮಾರ್ ಮಾತನಾಡಿ, ಪಿಸಿ &ಚಿmಠಿ;
ಪಿಎನ್ಡಿಟಿ ಕಾಯ್ದೆ ಕುರಿತು ವೈದ್ಯರಿಗೆ ಮಾತ್ರವಲ್ಲ ಪೊಲೀಸ್ ಇಲಾಖೆ
ಅಧಿಕಾರಿಗಳಿಗೂ ಅರಿವಿನ ಕೊರತೆ ಇದೆ. ನರ್ಸಿಂಗ್ ಹೋಂಗಳು
ಅಕ್ರಮ ಚಟುವಟಿಕೆ ನಡೆಸಿದ ಸಂದರ್ಭದಲ್ಲಿ ಪ್ರಕರಣ ದಾಖಲು
ಮಾಡಿಕೊಳ್ಳಲು ಪೊಲೀಸ್ ಇಲಾಖೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು
ಆರೋಪಿಸಿದರು. ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿಗಳು, ಈ ಕುರಿತು
ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ರಮ
ಚಟುವಟಿಕೆಯನ್ನು ಹತ್ತಿಕ್ಕುವ ದಿಸೆಯಲ್ಲಿ ಕಠಿಣ ಕ್ರಮ ಜರುಗಿಸಲು
ಹಿಂಜರಿಯುವುದಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.
ನಾಗರಾಜ್, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.
ರೇಣುಕಾರಾಧ್ಯ, ಸಮಿತಿಯ ಸದಸ್ಯರುಗಳಾದ ಡಾ. ಸುಮಿತ್ರ, ಡಾ.
ಎಸ್.ಜಿ. ಭಾರತಿ, ಡಾ. ಶಾರದಾ ಮಾಗಾನಹಳ್ಳಿ, ಡಾ. ಮೀರಾ ಅನಗವಾಡಿ
ಉಪಸ್ಥಿತರಿದ್ದರು.