ಆಹ್ವಾನ

ದಾವಣಗೆರೆ ಜ.30
    ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗಳ
ನೇಮಕಾತಿಗೆ ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿಯನ್ನು
ಆಹ್ವಾನಿಸಲಾಗಿದೆ.
    ಅರ್ಹತಾ ಮಾನದಂಡ, ಖಾಲಿ ಹುದ್ದೆಗಳ ಮೀಸಲಾತಿ,
ಆಯ್ಕೆಯ ಯೋಜನೆ, ಆನ್‍ಲೈನ್-ಅಪ್ಲಿಕೇಶನ್‍ಗಳನ್ನು ಸಲ್ಲಿಕೆ
ವಿವರಗಳನ್ನು ಜ.22 ರಂದು ವೆಬ್‍ಸೈಟ್ (ತಿತಿತಿ.ಡಿbi.oಡಿg.iಟಿ)  ನಲ್ಲಿ
ಮತ್ತು ಜ.30 ರ ನಂತರದ ದಿನದಂದು ಜಾರಿಯಾಗುವ
ಎಂಪ್ಲಾಯ್‍ಮೆಂಟ್ ನ್ಯೂಸ್/ಯೋಜಗಾರ್ ಸಮಾಚಾರ್‍ನಲ್ಲಿ
ಜಾಹಿರಾತನ್ನು ಪರಿಶೀಲಿಸಬಹುದು ಹಾಗೂ ಆಸಕ್ತ ಅಭ್ಯರ್ಥಿಗಳು
ಬ್ಯಾಂಕ್ ವೆಬ್‍ಸೈಟ್ ಮೂಲಕ ಆನ್‍ಲೈನ್ ಮೋಡ್‍ನಿಂದ ಸಹ ಅರ್ಜಿ
ಸಲ್ಲಿಸಬಹುದು.
 ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ,
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ
ನಿವಾಸದ ಹತ್ತಿರ, ಬಾಲರಾಜ ರಸ್ತೆ, ಶಿವಮೊಗ್ಗ-577201 ದೂ.ಸಂ:
08182-220925, ಇ-ಮೇಲ್ soಟಜieಡಿs_ಡಿeಜiಜಿಜಿmಚಿiಟ.ಛಿom ನ್ನು
ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಪುನರ್ವಸತಿ
ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *