ನೀಡಿ ಸಹಕರಿಸಲು ಮನವಿ
ದಾವಣಗೆರೆ ಜ.30
2020-21 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ
ಸಮೀಕ್ಷೆಯನ್ನು ಮಹಾನಗರಪಾಲಿಕೆಯಿಂದ
ಮಾಡಲಾಗುತ್ತಿದೆ. ಸಮೀಕ್ಷೆಗಾಗಿ ಮಹಾನಗರಪಾಲಿಕೆಯ
ಸಿಬ್ಬಂದಿ ತಮ್ಮ ಮನೆಗಳಿಗೆ ಭೇಟಿ ನೀಡುತ್ತಿದ್ದು, ಪಾಲಿಕೆ ಸಿಬ್ಬಂದಿ
ಕರ್ನಾಟಕ ಹೆಚ್ಟುಹೆಚ್ ಚಿಲ್ಡ್ರನ್ ಸರ್ವೇ ಮೊಬೈಲ್ ಆ್ಯಪ್ ಸ್ಕ್ಯಾನ್
ಮಾಡಲು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್,
ರೇಷನ್ ಕಾರ್ಡನ್ನು ಮತ್ತು 6 ರಿಂದ 14 ವರ್ಷದ ಮಕ್ಕಳಿದ್ದಲ್ಲಿ
ಈ ಮಕ್ಕಳ ಫೋಟೊವನ್ನು ನೀಡಿ ಸಹಕರಿಸಬೇಕೆಂದು
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.