ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ತೋಟಗಾರಿಕೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಕೆ ಉತ್ತೇಜನ ನೀಡಿರುವುದು ಸ್ವಾಗತರ್ಹ. ಇನ್ಯಾಮ್ಸ್ ನಲ್ಲಿ ಸಾವಿರಕ್ಕೂ ಹೆಚ್ಚಿನ ಕೃಷಿ ಮಂಡಿಗಳನ್ನು ಸೇರಿಸಿರುವುದರಿಂದ ರೈತರಿಗೆ ಬೆಳೆಯನ್ನು ಉತ್ತಮ ಬೆಲೆಗೆ ಮಾರಲು ಸಹಕಾರಿಯಾಗುವುದು. ಕೃಷಿ ಸಿಂಚಾಯಿ ಯೋಜೆನೆಯಡಿ ಹತ್ತು ಸಾವಿರ ಕೋಟಿ ಮೀಸಲಿಟ್ಟಿರುವುದರಿಂದ ನೀರಿನ ಸದ್ಭಾಳಕೆಗೆ ಅನುಕೂಲವಾಗುವುದು. ಕೃಷಿ ಸಂಸ್ಕರಣೆ, ರಾಷ್ಟ್ರೀಯ ಕೃಷಿ ನೀತಿ, ಕೃಷಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಹೊಸ ಯೋಜನೆಗಳನ್ನು ಘೋಷಿಸಿದ್ದರೆ ಉತ್ತಮವಾಗುತ್ತಿತ್ತು….
ಬಸವನಗೌಡ. ಎಂ. ಜಿ.
ತೋಟಗಾರಿಕೆ ವಿಜ್ಞಾನಿ
ತರಳಬಾಳು ಕೃಷಿ ವಿಜ್ಞಾನ ಕೇಂದ್ರ
ದಾವಣಗೆರೆ