ಸಾಸ್ವೆಹಳ್ಳಿ
ಹೋಬಳಿಯ ಹೊಸಹಳ್ಳಿ ಗ್ರಾಮದ ರೈತ ಸತ್ಯನಾರಾಯಣ ಅವರ
ಗದ್ದೆಯಲ್ಲಿ ಭಾನುವಾರ ಯಾಂತ್ರಿಕೃತ ಭತ್ತ ಬೇಸಾಯ ತರಬೇತಿ
ಮತ್ತು ಪ್ರಾತ್ಯಕ್ಷಿಕೆ ‘ಯಂತ್ರಶ್ರೀ’ ಕಾರ್ಯಕ್ರಮವನ್ನು
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ
ನಡೆಸಿಕೊಡಲಾಗಿತು.
ಸಂಪ್ರದಾಯಿಕ ಬೇಸಾಯ ಪದ್ದತಿಯಲ್ಲಿ ರೈತರು ಕೂಲಿ ಕಾರ್ಮಿಕರ
ಅಭಾವದಿಂದ ಸರಿಯಾದ ಸಮಯಕ್ಕೆ ಭತ್ತದ ನಾಟಿ ಮಾಡಲಾಗದೆ, ಬೆಳೆಗೆ
ಖರ್ಚು ಹೆಚ್ಚಿಗೆ ಮಾಡಿಯೂ ಇಳುವರಿ ಕಮ್ಮಿಯಾಗಿ, ರೈತ ನಷ್ಟ
ಅನುಭವಿಸುತ್ತಿದ್ದಾನೆ, ಯಾಂತ್ರಿಕೃತ ಪದ್ದತಿ ಅನುಸರಿಸುವುದರಿಂದ ಖರ್ಚು
ಕಮ್ಮಿ ಇಳುವರಿ ಹೆಚ್ಚು, ಬೆಳೆಗೆ ರೋಗ ಬಾದೆ ಹೆಚ್ಚಿನದಾಗಿ ಕಾಡುವುದಿಲ್ಲ.
ಎಂದು ತಾಲೂಕು ಯಂತ್ರಶ್ರೀ ಕೃಷಿ ಮೇಲ್ವಿಚಾರಕ ಗೋವಿಂದಪ್ಪ
ಹೇಳುತ್ತಾ.
ಒಂದು ಎಕರೆ ಭತ್ತದ ನಾಟಿಗೆ ರೊಳ್ಳೆ ಮಾಡಲು ಸಂಪ್ರಾದಯಿಕ
ಪದ್ಧತಿಗೆ 50 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು, ಯಂತ್ರಶ್ರೀ ಪದ್ದತಿ
ಅನುಸರಿಸಿದಲ್ಲಿ 30 ಲಕ್ಷ ಲೀಟರ್ ಸಾಕಾಗುತ್ತದೆ ಅದೇರೀತಿ ನಾಟಿ ಮಾಡಲು ಕೂಲಿ
ಕಾರ್ಮಿಕರಿಗೆ ನೀಡುವ ಖರ್ಚು, ಬಿತ್ತನೆ ಬೀಜ ಬಳಕೆಯಲ್ಲಿಯೂ ಶೇ.50 ರಷ್ಟು
ಕಮ್ಮಿಯಾಗಲಿದೆ, ಇಲ್ಲಿ 10 ರಿಂದ 12 ದಿನಗಳ ಭತ್ತ ಸಸಿ ನಾಟಿ ಮಾಡ
ಬಹುದಾಗಿದ್ದು, ಸಾಲಿನಿಂದ ಸಾಲಿಗೆ 11 ಹಿಂಚು ಸಸಿಯಿಂದ ಸಸಿಗೆ 6 ಹಿಂಚು ಅಂತರ
ಇರುವ ಕಾರಣಕ್ಕೆ ಭತ್ತದ ತಂಟೆಗಳು ಹೆಚ್ಚಿಗೆ ಬರುತ್ತವೆ ಇದರಿಂದ
ಇಳುವರಿ ಕೂಡ ಶೇ.30ರಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.
ಹೊನ್ನಾಳಿ ತಾಲ್ಲೂಕಿನಲ್ಲಿ 500 ಎಕರೆ ಗದ್ದೆಯಲ್ಲಿ ಈ ಬಾರಿ ಈ ಪದ್ದತಿಯನ್ನು
ಅನುಸರಿಸಿ ರೈತರು ಭತ್ತ ಬೆಳೆಯಲು ಚಾಲನೆ ನೀಡಲಾಗಿದ್ದು ರೈತರು
ಆಸಕ್ತಿ ತೋರಿದಲ್ಲಿ ಹೆಚ್ಚಿನ ಯಂತ್ರಗಳನ್ನು ನೀಡಲಾಗುವುದು, ಎಂದು ಈ
ಯೋಜನೆಯ ಮ್ಯಾನೇಜರ್ ಚೇತನ್ ತಿಳಿಸಿದರು.
ಯೋಜನೆಯ ಸೇವ ಪ್ರತಿನಿಧಿ ಕೆ.ಟಿ.ಹನುಮಂತರಾವ್, ಯಂತ್ರಶ್ರೀ
ಯೋಧ ಎನ್.ಉಮೇಶ್, ರೈತರುಗಳಾದ ಹಿತ್ತಲಮನೆ ಈಶ್ವರಪ್ಪ, ದಾಡಿ
ಶ್ರೀಧರ್, ಲಿಂಗಾಪುರದ ನಾಗರಾಜಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ
ರೈತರು ಪಾಲ್ಗೊಂಡಿದ್ದರು.
ಫೋಟೊ ಸುದ್ದಿ :-
ಎಸ್‍ವಿಎಲ್-ಭತ್ತ31(1)
ಎಸ್‍ವಿಎಲ್-ಭತ್ತ31(2)
ಸಾಸ್ವೆಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ರೈತ ಸತ್ಯನಾರಾಯಣ ಅವರ
ಗದ್ದೆಯಲ್ಲಿ ಭಾನುವಾರ ಯಾಂತ್ರಿಕೃತ ಭತ್ತ ಬೇಸಾಯ ತರಬೇತಿ
ಮತ್ತು ಪ್ರಾತ್ಯಕ್ಷಿಕೆ ‘ಯಂತ್ರಶ್ರೀ’ ಕಾರ್ಯಕ್ರಮವನ್ನು
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಚಾಲನೆ
ನೀಡುತ್ತಿರುವುದು, ತಾಲೂಕು ಯಂತ್ರಶ್ರೀ ಕೃಷಿ ಮೇಲ್ವಿಚಾರಕ
ಗೋವಿಂದಪ್ಪ, ಮ್ಯಾನೇಜರ್ ಚೇತನ್, ಯೋಜನೆಯ ಸೇವ ಪ್ರತಿನಿಧಿ
ಕೆ.ಟಿ.ಹನುಮಂತರಾವ್, ಯಂತ್ರಶ್ರೀ ಯೋಧ ಎನ್.ಉಮೇಶ್,
ರೈತರುಗಳಾದ ಹಿತ್ತಲಮನೆ ಈಶ್ವರಪ್ಪ, ದಾಡಿ ಶ್ರೀಧರ್, ಲಿಂಗಾಪುರದ
ನಾಗರಾಜಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು
ಪಾಲ್ಗೊಂಡಿದ್ದರು.