ಚಿಕ್ಕಮ್ಮ ಬಸವರಾಜ್

ದಾವಣಗೆರೆ ಜ. 03
ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಾದ್ಯಂತ
ಬರುವ ಎಲ್ಲಾ ತಾಲ್ಲೂಕುಗಳಲ್ಲಿ ಬಾಲಭವನಗಳನ್ನು
ನಿರ್ಮಿಸಲು ಜಮೀನಿನ ಅವಶ್ಯಕತೆ ಇದ್ದು, ಜಿಲ್ಲಾಡಳಿತದಿಂದ
ಬಾಲಭವನದ ಹೆಸರಿಗೆ ಜಮೀನು ಮಂಜೂರು ಮಾಡಿದ್ದಲ್ಲಿ,
ಭವನದ ಚಟುವಟಿಕೆಗಳನ್ನು ತಾಲ್ಲೂಕುವಾರು ವಿಸ್ತರಣೆ
ಮಾಡುವ ಅವಕಾಶವನ್ನು ಕಲ್ಪಿಸಬಹುದು ಎಂದು ರಾಜ್ಯ ಬಾಲ
ಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್
ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆÉ.
ಜಿಲ್ಲಾ ಬಾಲಭವನವು ದಾವಣಗೆರೆ, ಹರಿಹರ ನಗರಾಭಿವೃದ್ಧಿ
ಪ್ರಾಧಿಕಾರದ ವತಿಯಿಂದ 2004 ರಿಂದ ಜೆ.ಹೆಚ್. ಪಟೇಲ್
ಬಡಾವಣೆಯಲ್ಲಿರುವ ಉದ್ಯಾನವನ-1ರಲ್ಲಿ 15,675 ಚ.ಮೀ. ಹಾಗೂ
ಉದ್ಯಾನವನ-6ರ ಲ್ಲಿ 16,500 ಚ.ಮೀ. ವಿಸ್ತೀರ್ಣದ ಜಮೀನನ್ನು ಬಾಲ
ಭವನದ ಹೆಸರಿಗೆ ಮಂಜೂರಾಗಿರುತ್ತದೆ. ಈಗಾಗಲೇ ರಾಜ್ಯ ಬಾಲ
ಭವನದಿಂದ ವಿವಿಧ ಅಭಿವೃದ್ಧಿಗಾಗಿ ರೂ.43.81 ಲಕ್ಷ ಹಾಗೂ
ಮಕ್ಕಳ ಪುಟಾಣಿ ರೈಲು ಅಳವಡಿಸಲು ರೂ.102.36
ಲಕ್ಷಗಳನ್ನು ಹಾಗೂ ಮಕ್ಕಳ ಆಟಿಕೆಗಳ ಅಳವಡಿಕೆಗಾಗಿ
ಒಟ್ಟು ರೂ.15.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
ಪ್ರತಿ ವರ್ಷ ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ, ಕಲಾಶ್ರೀ
ಶಿಬಿರ, ವಾರಾಂತ್ಯ ಚಟುವಟಿಕೆ, ಬಾಲಶ್ರೀ ಪ್ರಶಸ್ತಿ ಶಿಬಿರಗಳನ್ನು
ಏರ್ಪಡಿಸಲಾಗತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿ
ಸಾಲಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು
ಅನುದಾನವನ್ನು ಕೇಂದ್ರ ಬಾಲ ಭವನದಿಂದ ಬಿಡುಗಡೆ
ಮಾಡಲಾಗುತ್ತಿದೆ. ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ
ಭವನದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚಿನ
ಅನುದಾನವನ್ನು, ಸೌಲಭ್ಯಗಳನ್ನು ಪಡೆಯುವ ಮಕ್ಕಳ
ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ, ಪಾರ್ಕ್ ಅಭಿವೃದ್ಧಿ ಹಾಗೂ
ಮಕ್ಕಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ರೀತಿಯ

ಆಟಿಕೆಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲು
ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *