ದಾವಣಗೆರೆ ಫೆ. 02
       ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ದಾವಣಗೆರೆ
ವತಿಯಿಂದ ಫೆ.4 ರಂದು ಸಂಜೆ 6.30 ರಿಂದ 7.30
ಗಂಟೆಯವರೆಗೆ ಪರಿಸರ ಸ್ನೇಹಿ ಭತ್ತ ಬೇಸಾಯ ಕುರಿತು
ಆನ್‍ಲೈನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು,
ಗೂಗಲ್ ಮೀಟ್ ಲಿಂಕ್ (meeಣ.googಟe.ಛಿom/xqಟಿ-mಞಜಣ-ಡಿರಿg) ಬಳಸಿ
ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಆಧುನಿಕ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವ
ತವಕದಲ್ಲಿ ಶಿಫಾರಸ್ಸಿಗಿಂತ ಹೆಚ್ಚು ರಸಗೊಬ್ಬರ ಹಾಗೂ
ಪೀಡೆನಾಶಕಗಳ ಅವೈಜ್ಞಾನಿಕ ಬಳಕೆಯಿಂದ ಕೃಷಿ ಮಾಡುವ
ವೆಚ್ಚವು ಅಧಿಕವಾಗಿದ್ದು ಪಡೆಯುವ ಲಾಭಾಂಶ
ಕಡಿಮೆಯಾಗಿದೆ. ಆಹಾರವು ವಿಷಯುಕ್ತವಾಗುವುದರ
ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೇ
ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ದಿಶೆಯಲ್ಲಿ
ಪ್ರಸ್ತುತವಾಗಿ ಅನುಸರಿಸುತ್ತಿರುವ ಆಧುನಿಕ ಕೃಷಿಯಲ್ಲಿ
ಬದಲಾವಣೆಯ ಅವಶ್ಯಕತೆಯಿದ್ದು, ರಾಸಾಯನಿಕಗಳ
ಬಳಕೆ ಮಿತಗೊಳಿಸಿ ಪರಿಸರ ಸ್ನೇಹಿ ಭತ್ತ ಬೆಳೆಯುವ
ವಿಷಯದ ಬಗ್ಗೆ  ಡಾ.ನಾಗನಗೌಡ ಎಂ., ಬೇಸಾಯ ಶಾಸ್ತ್ರಜ್ಞರು,
ಇಕೋ ಅಗ್ರಿಪ್ರೂನರ್ಸ್ ಪ್ರೈ.ಲಿ., ದಾವಣಗೆರೆ ಇವರು ವಿಷಯ
ಕುರಿತು ತರಬೇತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ
ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ದಾವಣಗೆರೆ, ಮೊಬೈಲ್
ಸಂಖ್ಯೆ: 9945910090/8277928964 ಇವರನ್ನು ಸಂಪರ್ಕಿಸಬಹುದು
ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ

ನಿರ್ದೇಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *