ಹೊನ್ನಾಳಿ ಭ2 – ಪುರೋಹಿತ ಕಾರ್ಯದ ಭವ್ಯ ಪರಂಪರೆ ಉಳಿಸಿ – ಬೆಳೆಸಿಕೊಂಡು ಹೋಗುವಂತೆ ಮಾಡುವುದೇ ಇಂದಿನ ಪ್ರಥಮ అಧೀವೇಶನದ ಮುಖ್ಯ ಕಾರ್ಯವಾಗಬೇಕಿದೆ ಎಂದು ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅಖಿಲ ಕರ್ನಾಟಕ ವೀರಶೈವ ಪುರೋ ಹಿತ ಮಹಾಸಭಾದ ವತಿಯಿಂದ ಇಲ್ಲಿನ ಹಿರೇಕಲ್ಮಠದಲ್ಲಿ ಮಂಗಳವಾರ ನಡೆದ ಪ್ರಥಮ ಅಧಿವೇಶನ ಹಾಗೂ ವೀರಶೈವ ಷೋಡಶ ಸಂಸ್ಕಾರಗಳ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಉತ್ತಮ ಭಾಷೆಯ ಅರಿವಿನಿಂದ ಮಂತ್ರ ಗಳ ಅರ್ಥ, ನೈಜತೆಯನ್ನು ಪುರೋಹಿತರು ಆರಿಯಲು ಸಾಧ್ಯ. ಪುರವನ್ನು ಪುರೋಹಿತರು ಕಾಪಾಡಿದರೆ – ಪುರೋಹಿತರ ಹಿತ ಕಾಪಾಡು ನವರಾರು? ಎಂಬುದು ಚರ್ಚಿತ ವಿಷಯ ವಾಗಬೇಕು ಎಂದು ಶ್ರೀಗಳು ಹೇಳಿದರು.
ಮಾಜಿ ಶಾಸಕ ಶಾಂತನಗೌಡ್ರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಪುರೋಹಿತರನ್ನು ಕೇಳಿ ಮುಂದಿನ ಸಭೆಗಳನ್ನು ನಿಶ್ಚಯಿಸುವ ಜೊತೆಗೆ ಜನತೆಗೆ ನೀವೇ ಮಾರ್ಗ ದರ್ಶನ ನೀಡಿರಿ. ವಾಸ್ತುವಿನ ನೆಪಗಳ, ಹೆಸರು ಬದಲಾಯಿಸುವ ಪರಿಪಾಠಗಳ, ಆಹಾರ ಪದಾರ್ಥತವಾದ ಅಕ್ಕಿಯನ್ನು ಅಕ್ಷತೆಯ ನೆಪದಲ್ಲಿ ಕಾಲಿನಲ್ಲಿ ತುಳಿಯದಂತೆ ಮಾಡುವ ಕೆಲವೊಂದು ಸುಧಾರಣೆ ನಿಮ್ಮಿಂದ ಸಾಧ್ಯವಿದ್ದು ಈ ಕಾರ್ಯಕ್ಕೆ ಮುಂದಾಗಿರಿ ಎಂದರು.
ನಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಮಾತನಾಡಿ, ಪುರೋಹಿತ ಕಾರ್ಯವು ಇತರ ರನ್ನು ದೇವರಿಗೆ ಮುಟ್ಟಿಸುವ ಸಾಕ್ಷಾತ್ಕಾರದ ಕೈಂಕರ್ಯವಾಗಿದೆ. ನಿಮಗೆ ಗಂಡು ಮಗುವಾ ಗುವ ಭವಿಷ್ಯವಿದೆ ಎಂದು ಮನೆ ಮುರಿಯು ವಂತಹ ಕೆಲಸಗಳು ಆಗುತ್ತಿರುವುದನ್ನು ಅರಿತಿದ್ದೇವೆ.
ಜೋತಿಷ್ಯ ಶಾಸ್ತ್ರವು ಗ್ರಹಗಳ ಸಂಚಾರದ ನಿಯಮವನ್ನು ಹೊಂದಿರುವುದು ತಿಳಿದ ವಿಷಯವೇ ಆಗಿದೆ ನಮಗೂ ಸಾಡೇಸಾತ್ ಇದೆ ಎಂದು ಹೇಳಿ ಇಂತಹ ಪೂಜೆ ಮಾಡಿ ಎಂದಿದ್ದರು. ವಿಧಿಯಿಲ್ಲದೇ ನಾವು ಹೇಳುವ ಪೂಜೆಗಳನ್ನು ಮಾಡಿಸಲು ಮುಂದಾಗುತ್ತೇವೆ. ತಿಳಿದಿರುವ ಪುರೋಹಿತರು ತಿಳಿಯದವರಿಗೆ ತಿಳಿಸುವ ಕಾರ್ಯ ಈ ಅಧಿವೇಶನದಲ್ಲಿ ಆಗಲಿ ಎಂದು ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹನುಮಂತರಾಯ ಮಾತನಾಡಿ, ಪುರೋಹಿತ ಕಾರ್ಯಗಳಲ್ಲಿ ಬದಲಾವಣೆಗಳು ಬೇಕು. ನಾವು ಹೆಚ್ಚು ಬಸವ ತತ್ವದ ಸಭೆಗಳಿಗೆ ಭಾಗ ವಹಿಸಿದ್ದರಿಂದ ಅಕ್ಕಿಗಳ ಬದಲು ಹೂಗಳನ್ನು ಬಳಸಿದ್ದನ್ನು ಕಂಡಿದ್ದೇನೆ. ಶ್ರೀಮಂತ ಸಂಸ್ಕೃತಿ ಎಂದುಕೊಳ್ಳುವ ನಾವು ಪುರೋಹಿತ ಪದ್ಧತಿಯ ವೈಜ್ಞಾನಿಕತೆ ಆರಿತು ತಿದ್ದಿಕೊಂಡು ಹೋಗುವಂತಿದ್ದರೆ ಒಳತಾಗಲಿದೆ ಎಂದರು.
ಹೊಟ್ಯಾಪುರ ಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಮಠದ ಸದ್ಗುರು ಶಿವಕುಮಾರ ಹಾಲಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಧ್ಯಕ್ಷತೆಯನ್ನು ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತ್ರಿ ಮಠದ್ ವಹಿಸಿದ್ದರು.
ಸಭೆಯಲ್ಲಿ ರಾಜ್ಯ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳ ನಿರ್ದೇಶಕರಾದ ಗೀತಾ ರವೀಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ,ಎಂ.ಪಿ ರಮೇಶ್ ಮಾತನಾಡಿದರು.
ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ. ವಿಚಾರ ಸಂಕಿರಣ ಭಾಗ-1 ಕಾರ್ಯಕ್ರಮದಲ್ಲಿ ಗರ್ಭಧಾನ ವಿಷಯದ ಬಗ್ಗೆ ತುಮಕೂರಿನ ಕೆ.ಎಸ್.ವೀರಪ್ಪ ದೇವರು, ಪುಂಸವನ ವಿಷಯವಾಗಿ ಹಿರೇಕೆರೂರು ಚನ್ನೇಶಾಸ್ತ್ರಿ ಮಠದ ಸೀಮಂತೋನ್ನಯನ (ಗರ್ಭಲಿಂಗಧಾರಕ) ವಿಷಯದ ಮೇಲೆ ಕಡೂರು ತಾಲೂಕು ಯಗಟಿ ಶಿವಲಿಂಗಸ್ವಾಮಿ ವಿಚಾರ ಮಂಡಿಸಿದರು.
ಸಭೆಯಲ್ಲಿ ಡಿವೈಎಸ್ ಪಿ ಪ್ರಶಾಂತ್ ಮುನ್ನೋಳಿ, ಕೆ.ಜಿ. ಮಹದೇವ ಸ್ವಾಮಿ, ನಾಗರಾಜ್ ಶಾಸ್ತ್ರಿ ಎಂ.ಎಸ್ ಶಾಸ್ತ್ರಿ , ಹೊಳೆಮಠ, ಅನ್ನದಾನಯ್ಯ ಶಾಸ್ತ್ರಿ, ಹಿರಿಯ ಶಾಸ್ತ್ರಿಗಳಾದ ರುದ್ರರಾಧ್ಯ ಶಿವಲಿಂಗಾರಾಧ್ಯರನ್ನು ಸನ್ಮಾನಿಸಲಾಯಿತು.