ಯೋಜನೆಯಡಿ ಅರ್ಜಿ ಆಹ್ವಾನ

ದಾವಣಗೆರೆ ಫೆ. 02
ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನ
ಮಂತ್ರಿಗಳ ಕಿರು ಆಹಾರ ಉದ್ದಿಮೆಗಳ
ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು 2020-21ನೇ
ಸಾಲಿನಿಂದ ಪ್ರಾರಂಭಿಸಲಾಗಿದ್ದು, ಆಹಾರ ಸಂಸ್ಕರಣೆಯಲ್ಲಿ ಹಾಲಿ
ಕಾರ್ಯನಿರ್ವಹಿಸುತ್ತಿರುವ ಆಹಾರ ಸಂಸ್ಕರಣಾ ಘಟಕವನ್ನು
ಹೊಸದಾಗಿ ಪ್ರಾರಂಭಿಸಲು ಆಸಕ್ತಿಯಿರುವ ರೈತ ಉತ್ಪಾದಕರ
ಸಂಸ್ಥೆಗಳು, ಉತ್ಪಾದಕರ ಸೊಸೈಟಿಗಳು, ಸ್ವಸಹಾಯ
ಸಂಘದ ಸದಸ್ಯರು, ವೈಯಕ್ತಿಕ ಕಿರು ಉದ್ದಿಮೆದಾರರಿಂದ
ಅರ್ಜಿ ಆಹ್ವಾನಿಸಲಾಗಿದೆ.
     ಈ ಯೋಜನೆಯಡಿಯಲ್ಲಿ  ಕಿರು ಆಹಾರ ಸಂಸ್ಕರಣೆಯ ಪ್ರತಿ
ಘಟಕಕ್ಕೆ ರೂ.10.00 ಲಕ್ಷದ ಗರಿಷ್ಠ ಮಿತಿಯಿದ್ದು, ಅರ್ಹ
ಯೋಜನಾ ವೆಚ್ಚದ ಶೇ.35 ರಷ್ಟು ಸಾಲ ಸಂಪರ್ಕವಿರುವ
ಸಹಾಯಧನವನ್ನು ಪಡೆಯಬಹುದಾಗಿದೆ.
ಫಲಾನುಭವಿಗಳ ಕೊಡುಗೆ ಯೋಜನಾ ವೆಚ್ಚದ ಕನಿಷ್ಠ 10
ರಷ್ಟಿರಬೇಕು ಹಾಗೂ ಬಾಕಿ ಹಣದ ಸಹಾಯವು ಬ್ಯಾಂಕಿನ
ಸಾಲದೊಂದಿಗೆ ದೊರೆಯುವುದು.  ಆಹಾರ ಸಂಸ್ಕರಣೆಯಲ್ಲಿ
ತೊಡಗಿರುವ ಸ್ವಸಹಾಯ ಸಂಘಗಳ ಪ್ರತಿ ಸದಸ್ಯರಿಗೆ
ಪ್ರಾಥಮಿಕ ಬಂಡವಾಳವಾಗಿ ರೂ. 40000/- ಸಾಲವಾಗಿ
ನೀಡಲಾಗುವುದು ಹಾಗೂ ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್,
ಬ್ರಾಂಡಿಂಗ್, ಮಾರ್ಕೆಟಿಂಗ್ ಸಂಸ್ಕರಣಾ ಸೇವೆಗಳ ಜೊತೆಗೆ
ತರಬೇತಿಗಳನ್ನು ನೀಡಲಾಗುವುದು.
      ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿಯಲ್ಲಿ
ದಾವಣಗೆರೆ ಜಿಲ್ಲೆಗೆ  ಸಿರಿಧಾನ್ಯ ಬೆಳೆಗಳ ಆಯ್ಕೆಯಾಗಿದ್ದು,
ಸಿರಿಧಾನ್ಯ ಬೆಳೆಗಳ ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ
ಘಟಕಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆದ್ದರಿಂದ
ಜಿಲ್ಲೆಯಲ್ಲಿ ಸಿರಿಧಾನ್ಯ ಹಾಗೂ ಇತರೆ ಆಹಾರ ಉತ್ಪನ್ನಗಳ
ಸಂಸ್ಕರಣೆಯಲ್ಲಿ ತೊಡಗಿರುವ ವೈಯಕ್ತಿಕ ಕಿರು
ಉದ್ದಿಮೆದಾರರು ಆನ್‍ಲೈನ್
ಮುಖಾಂತರ(hಣಣಠಿ://ಠಿmಜಿme.moಜಿಠಿi.gov.iಟಿ) ಯೋಜನಾ ವರದಿಯ
ಸಾಫ್ಟ್‍ಕಾಪಿಯನ್ನು ಅಪ್‍ಲೋಡ್ ಮಾಡಿ ನಂತರ
ಹಾರ್ಡ್‍ಕಾಪಿಯನ್ನು ಜಂಟಿ ಕೃಷಿ ನಿರ್ದೇಶಕರು, ದಾವಣಗೆರೆ

ಕಚೇರಿಗೆ ಹಾಗೂ ರೈತ ಉತ್ಪಾದಕ ಗುಂಪುಗಳು,
ಸ್ವಸಹಾಯ ಸಂಘಗಳು, ಉತ್ಪಾದಕರ ಸೊಸೈಟಿಗಳು
ಅರ್ಜಿಗಳನ್ನು ನೇರವಾಗಿ ಜಂಟಿ ಕೃಷಿ ನಿರ್ದೇಶಕರು, ದಾವಣಗೆರೆ
ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ, ತೋಟಗಾರಿಕೆ
ಇಲಾಖೆ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಅಥವಾ
ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಪ್ರತಿಮಾ ಎ.ಎಸ್.
ಸಹಾಯಕ ಕೃಷಿ ನಿರ್ದೇಶಕರು (ವಿಷಯ ತಜ್ಞ) ಇವರ
ಮೊಬೈಲ್ ಸಂಖ್ಯೆ : 8277931105 ಗೆ ಕರೆ ಮಾಡಿ ಮಾಹಿತಿಯನ್ನು
ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ
ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *