ದಾವಣಗೆರೆ, ಫೆ.04
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ
ಪ್ರಥಮ ದರ್ಜೆ ಸಹಾಯಕ(ಎಫ್ಡಿಎ) ಮತ್ತು ದ್ವಿತೀಯ ದರ್ಜೆ
ಸಹಾಯಕ(ಎಸ್ಡಿಎ) ಹುದ್ದೆ ಭರ್ತಿಗಾಗಿ ನಡೆಯುವ
ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆ
ಫೆ.08 ರಿಂದ 16 ರವರೆಗೆ ಉಚಿತ ಪರೀಕ್ಷಾಪೂರ್ವ
ತರಬೇತಿಯನ್ನು ಆಯೋಜಿಸಲಾಗಿದೆ.
ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಫೆ.08 ರ
ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಪಿ.ಬಿ.ರಸ್ತೆ,
ಕರೂರು ಇಂಡಸ್ಟ್ರಿಯಲ್ ಏರಿಯಾ, ಜಿಲ್ಲಾಡಳಿತ ಭವನ
ಇಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ
ಸಂಖ್ಯೆ-51, 2ನೇ ಮಹಡಿ, ಬಿ ಬ್ಲಾಕ್ ಇಲ್ಲಿ ತರಬೇತಿಯನ್ನು
ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ
08192-259446 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ
ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಕೆ.ಎನ್. ಗಿರೀಶ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.