ಸಾಸ್ವೆಹಳ್ಳಿ
ಗ್ರಾಮದ ತುಂಗಭದ್ರಾ ನದಿಯಲ್ಲಿ ರಾಜ್ಯ ಸರ್ಕಾರದ ರೂ.460 ಕೋಟಿ
ಅನುಷ್ಠನಾದ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು
ಇದರ ವೀಕ್ಷಣೆಗಾಗಿ ಕರ್ನಾಟಕ ನೀರಾವರಿ ನಿಗಮ ಲಿ. (ಕೆಎನ್‍ಎನ್‍ಎಲ್) ಎಂ.ಡಿ
ಮಲ್ಲಿಕಾರ್ಜುನ್ ಗುಂಗೆ, ಸ್ಥಳಕ್ಕೆ ಬುಧವಾರ ಭೇಟಿಕೊಟ್ಟು ಇನ್ನೂ ಆರು
ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.
ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಗುತ್ತಿಗೆದಾರ ಜಿವಿಪಿಆರ್ ಕಂಪನಿ
ಮತ್ತು ನೀರಾವರಿ ನಿಗಮದ ಎಂಜಿನಿಯರ್‍ಗಳಿಂದ ಪಡೆದು, ನಂತರ
ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಯೋಜನೆ ಸಂಪೂರ್ಣಗೊಂಡಲ್ಲಿ
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಕೆಲವು ತಾಲೂಕುಗಳ ಒಟ್ಟು 121
ಕೆರೆಗಳು ನೀರು ತುಂಬಲಿದ್ದು, ಈಗಾಗಲೆ 230 ಕಿ.ಮೀ, ಪೈಪ್‍ಲೈನ್ ಕೆಲಸ
ಮುಗಿದಿದ್ದು 70 ಕಿ.ಮೀ, ಬಾಕಿ ಇದೆ, ವಾಟರ್ ಡೆಲವರಿ ಚೇಂಬರ್ ಕೆಲಸ ಸಂಪೂರ್ಣ
ಮುಗಿದಿದ್ದು, ಜಾಕ್‍ವೆಲ್ ಮತ್ತು ನದಿಗೆ ಅಡ್ಡಲಾಗಿ ವೇರ್ ನಿರ್ಮಾಣದ ಕೆಲಸ
ಪ್ರಗತಿಯಲ್ಲಿದ್ದು, ಹಗಲು ರಾತ್ರಿ ಎರಡು ಸಿಪ್ಟ್‍ಗಳಲ್ಲಿ ಕೆಲಸ ಮಾಡಿ ಜೂನ್
ತಿಂಗಳೊಳಗೆ ಕಾಮಗಾರಿ ಮುಗಿಸಲು ಎಂಜಿನಿಯರ್‍ಗಳಿಗೆ ತಿಳಿಸಿರುವುದಾಗಿ
ಹೇಳಿದರು.
ಜಿವಿಪಿಆರ್ ಕಂಪನಿಯ ಎಂಜಿನಿಯರ್ ಶ್ರೀನಿವಾಸ್, ಸುರೇಂದ್ರ, ಮಸ್ತಾನ್ ಉಲ್ಲಾ, ಹಾಗೂ
ನೀರಾವರಿ ನಿಗಮದ ಸಿಇ ರಮೇಶ್, ಎಸ್‍ಇ ಹರೀಶ್, ಎಇಇ ರಾಜೇಂದ್ರ ಪ್ರಸಾದ್, ಎಇ
ಜಗದೀಶ್, ಕರಿಯಪ್ಪ ಜೊತೆಯಲ್ಲಿದ್ದರು.

ಎಸ್‍ವಿಎಲ್-ನೀರಾವರಿ05(1)
ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿಯ ಜಾಕ್‍ವೆಲ್ ನಿರ್ಮಾಣ ಸ್ಥಳಕ್ಕೆ ಕೆಎನ್‍ಎನ್‍ಎಲ್
ಎಂ.ಡಿ ಮಲ್ಲಿಕಾರ್ಜುನ್ ಗುಂಗೆ ಭೇಟಿ ನೀಡಿ ಎಂಜಿನಿಯರ್‍ಗಳಿಗೆ ಬೇಗ
ಕಾಮಗಾರಿಯನ್ನು ಮುಗಿಸಿಕೊಡುವಂತೆ ಸೂಚಿಸುತ್ತಿರುವುದು.
ಗುತ್ತಿಗೆದಾರ ಜಿವಿಪಿಆರ್ ಕಂಪನಿಯ ಎಂಜಿನಿಯರ್ ಶ್ರೀನಿವಾಸ್, ಸುರೇಂದ್ರ, ಮಸ್ತಾನ್
ಉಲ್ಲಾ, ಹಾಗೂ ನೀರಾವರಿ ನಿಗಮದ ಸಿಇ ರಮೇಶ್, ಎಸ್‍ಇ ಹರೀಶ್, ಎಇಇ ರಾಜೇಂದ್ರ
ಪ್ರಸಾದ್, ಎಇ ಜಗದೀಶ್, ಕರಿಯಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *