ಸಾಸ್ವೆಹಳ್ಳಿ
ಹೋಬಳಿಯ ಲಿಂಗಾಪುರ(ಬಾಗವಾಡಿ ರಸ್ತೆಯಲ್ಲಿ)ಗ್ರಾಮದ ರಾಜಪ್ಪ ಎಂಬುವರ
ಎರಡು ಎಕರೆ ಅಡಕೆ ತೋಟಕ್ಕೆ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು
ಹೊನ್ನಾಳಿ ಅಗ್ನಿ ಶಾಮಕ ಧಳದವರು ಅಗ್ನಿ ನಂದಿಸುವ ಕಾರ್ಯದಲ್ಲಿ
ತೊಡಗಿದ್ದರು.
ತೋಟದಲ್ಲಿ ಹಾಕಲಾಗಿದ್ದ ಅಡಕೆ ಸಿಪ್ಪೆಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ,
ತೋಟದ ತುಂಬ ಬಿದ್ದಿದ್ದ ತೆಂಗಿನ ಗರೆ, ತೇಗದ ಗಿಡದ ಎಲೆ, ಎತ್ತರವಾಗಿ
ಬೆಳೆದಿದ್ದ ಕಸಕ್ಕೆ ಆವರಿಸಿಕೊಂಡಿದ್ದರಿಂದ ಈ ಅವಘಡ ನಡೆದಿದ್ದು. ಅಡಕೆ
ಗಿಡಗಳಿಗೆ ಬೆಂಕಿಯ ಜ್ವಾಲೆ ತಗುಲಿದ್ದು ಯಾವುದೇ ರೀತಿಯ ಹೆಚ್ಚಿನ
ಹಾನಿಯಾಗಿರುವುದಿಲ್ಲ ಎಂದು ಉಪತಹಶೀಲ್ದಾರ್ ಪರಮೇಶ್ನಾಯ್ಕ್ ತಿಳಿಸಿದ್ದಾರೆ.