ರೈಸಿಂಗ್ ಮೇನ್ ಪೈಪ್ಲೈನ್ ಅಳವಡಿಸಲು ಡಿಸಿ ಸ್ಥಳ
ವೀಕ್ಷಣೆ
ದಾವಣಗೆರೆ ಫೆ.10
ಭರಮಸಾಗರ ಏತ ನೀರಾವರಿ ಯೋಜನೆ ಕಾಮಗಾರಿಗೆ
ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಸಿಂಗ್ ಮೇನ್
ಪೈಪ್ಲೈನ್ ಅಳವಡಿಸುವ ಕುರಿತು ಅಧಿಕಾರಿಗಳೊಂದಿಗೆ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಬುಧವಾರದಂದು
ಹದಡಿ ರಸ್ತೆಯ ಲೋಕಿಕೆರೆ ಬ್ರಿಡ್ಜ್ ಬಳಿ ಸ್ಥಳ ವೀಕ್ಷಣೆ
ಮಾಡಿದರು. ಈ ವೇಳೆ ಎಇಇ, ಎನ್ಹೆಚ್ಎಐ ಅಧಿಕಾರಿಗಳು,
ಶಿರಮಗೊಂಡನಹಳ್ಳಿ ಗ್ರಾಮಸ್ಥರು ಹಾಗೂ ರವೀಂದ್ರನಾಥ
ಬಡಾವಣೆ ನಿವಾಸಿಗಳು ಇದ್ದರು.