ದಾವಣಗೆರೆ,ಫೆ.11
ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳು ಹಾಗೂ ಶಾಸಕರಾದ ಎಂ.ಪಿ.ರೇಣುಕಾಚಾರ್ಯ
ಇವರು ಫೆ.11, 12, 13, 14 ಮತ್ತು 15 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳುವರು.
ಫೆ.11 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ
ಹೊರಟು ರಾತ್ರಿ 8 ಗಂಟೆಗೆ ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ
ಮಾಡುವರು. ಫೆ.12 ರಂದು ಬೆಳಿಗ್ಗೆ 11 ಗಂಟೆಗೆ ಸವಳಂಗ
ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳ
ಹಾಗೂ ಸಿ.ಸಿ. ರಸ್ತೆ ಕಾಮಗಾರಿಯ ಉದ್ಘಾಟನೆ ನೆರವೇರಿಸುವರು.
ಮಧ್ಯಾಹ್ನ 12 ಕ್ಕೆ ಸೂರಗೊಂಡನಕೊಪ್ಪ ಗ್ರಾಮದಲ್ಲಿ
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ
ಕೊಠಡಿಗಳ ಉದ್ಘಾಟನೆ ನೆರವೇರಿಸುವರು ಹಾಗೂ ಸಂತ
ಸೇವಾಲಾಲ್ ಜಯಂತಿ ಕಾರ್ಯಕ್ರಮದ ಸಿದ್ದತೆ ಪರಿಶೀಲಿಸುವರು.
ಮಧ್ಯಾಹ್ನ 1.15 ಕ್ಕೆ ಸೂರಗೊಂಡಕೊಪ್ಪ ತಾಂಡಾದಲ್ಲಿ
ಸೇವಾಲಾಲ್ ಭವನದ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 2
ಗಂಟೆಗೆ ಹಳೆಜೋಗ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ
ಸಿ.ಸಿ, ಕೂಡು ರಸ್ತೆ, ಕಾಮಗಾರಿಯ ಉದ್ಘಾಟನೆ ನೆರವೇರಿಸುವರು.
ಮಧ್ಯಾಹ್ನ 3 ಗಂಟೆಗೆ ಹೊಸಜೋಗ ಗ್ರಾಮದಲ್ಲಿ ತಾಂಡಾದಲ್ಲಿ
ಸೇವಾಲಾಲ್ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ನೆರವೇರಿಸುವರು. ಮಧ್ಯಾಹ್ನ 3.45 ಕ್ಕೆ
ಸೂರಗೊಂಡನಕೊಪ್ಪ ಗ್ರಾಮದಲ್ಲಿ ಸಂತ ಸೇವಾಲಾಲ್
ಜಯಂತಿ ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ಪರಿಶೀಲನೆ
ನಡೆಸುವರು. ರಾತ್ರಿ 7 ಗಂಟೆಗೆ ಹೊನ್ನಾಳಿಗೆ ತೆರಳಿ ವಾಸ್ತವ್ಯ
ಮಾಡುವರು.
ಫೆ.13 ರಂದು ಬೆಳಿಗ್ಗೆ 11 ಗಂಟೆಗೆ ಹೊನ್ನಾಳಿಯ ಕೃಷಿ
ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮಳಿಗೆಗಳ
ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು.
ಬೆಳಿಗ್ಗೆ 11.45 ಕ್ಕೆ ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ
ವ್ಯಾಪ್ತಿಯಲ್ಲಿ ಬರುವ ಗೋವಿನಕೋವಿ ಗ್ರಾಮದಲ್ಲಿ ಸೂರು
ಹಾಕಿದ ಸಂತೆಕಟ್ಟೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ಹಾಗೂ ಸಿ.ಸಿ.ರಸ್ತೆ ಕಾಮಗಾರಿಯ ಉದ್ಘಾಟನೆ ನೆರವೇರಿಸುವರು.
ಮಧ್ಯಾಹ್ನ 12.30 ಕ್ಕೆ ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ
ವ್ಯಾಪ್ತಿಯಲ್ಲಿ ಬರುವ ನ್ಯಾಮತಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ
ಮಳಿಗೆಗಳ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ
ನೆರವೇರಿಸುವರು. ಮಧ್ಯಾಹ್ನ 1.30 ಕ್ಕೆ
ಸೂರಗೊಂಡನಕೊಪ್ಪ ಗ್ರಾಮದಲ್ಲಿ ಸಂತ ಸೇವಾಲಾಲ್
ಜಯಂತಿ ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ಪರಿಶೀಲನೆ
ನಡೆಸುವುದು. ಸಂಜೆ 6.30 ಕ್ಕೆ ಹೊನ್ನಾಳಿಗೆ ತೆರಳುವರು.
ರಾತ್ರಿ 8 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ
ಜ್ಯೋತಿ ಮತ್ತು ಎಸ್.ಸಿ.ವಿಜಯಕುಮಾರ್ ಇವರ ಪುತ್ರಿಯ
ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 9.30 ಕ್ಕೆ
ಹೊನ್ನಾಳಿಗೆ ತೆರಳಿ ವಾಸ್ತವ್ಯ ಮಾಡುವರು.
ಫೆ .14 ರ ಬೆಳಿಗ್ಗೆ 10.45 ಕ್ಕೆ ಸೂರಗೊಂಡನಕೊಪ್ಪದಲ್ಲಿ
ನಡೆಯುವ ಸಂತ ಸೇವಾಲಾಲ್‍ರವರ 282 ನೇ ಜಯಂತಿ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.45 ಕ್ಕೆ
ಹೊನ್ನಾಳಿಗೆ ತೆರಳುವರು. ರಾತ್ರಿ 7 ಗಂಟೆಗೆ ದಾವಣಗೆರೆ
ನಗರದಲ್ಲಿ ನಡೆಯುವ ಪೊಗರು ಚಲನಚಿತ್ರದ
ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು.
ರಾತ್ರಿ 8 ಗಂಟೆಗೆ ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ
ಎಂ.ಬಸವರಾಜನಾಯ್ಕ, ಮಾಜಿ ಶಾಸಕರು, ಮಾಯಕೊಂಡ
ಕ್ಷೇತ್ರ ಇವರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ರಾತ್ರಿ 9.30 ಕ್ಕೆ ಹೊನ್ನಾಳಿಯಲ್ಲಿ ವಾಸ್ತವ್ಯ
ಮಾಡುವರು.
ಫೆ.15 ರಂದು ಬೆಳಿಗ್ಗೆ 11 ಗಂಟೆಗೆ ಹೊನ್ನಾಳಿ ಪಟ್ಟಣದಲ್ಲಿ
ನಡೆಯುವ ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.10
ಗಂಟೆಗೆ ಹೊನ್ನಾಳಿಯ ಹಿರೇಮಠ ಗ್ರಾಮದಲ್ಲಿ ಸಿ.ಸಿ. ರಸ್ತೆ
ಕಾಮಗಾರಿಗಳ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 1
ಗಂಟೆಗೆ ದೇವನಾಯಕನಹಳ್ಳಿಯಲ್ಲಿ ತುಂಗಭದ್ರ ನದಿಗೆ
ಹೊಳೆಮೆಟ್ಟಿಲುಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ಹಾಗೂ ದೇವನಾಯಕನಹಳ್ಳಿ ಗ್ರಾಮದಲ್ಲಿ ಸಿ.ಸಿ.ರಸ್ತೆಗಳ
ಉದ್ಘಾಟನೆ ನೆರವೇರಿಸುವುದು. ಮಧ್ಯಾಹ್ನ 2.15 ಕ್ಕೆ ಹೊನ್ನಾಳಿಯ
ಪ್ರಯಾಣ ಮತ್ತು ಸಾರ್ವಜನಿಕರ ಕುಂದುಕೊರತೆಗಳ
ಅಹವಾಲುಗಳನ್ನು ಸ್ವೀಕರಿಸುವರು. ರಾತ್ರಿ 9 ಗಂಟೆಗೆ
ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಗಳ
ಕಾರ್ಯದರ್ಶಿಯವರ ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===