ಪಶುಸಂಗೋಪನೆ ಸಚಿವರು ಹಾಗೂ ಬೀದರ್ ಮತ್ತು
ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಪ್ರಭು. ಬಿ. ಚವ್ಹಾಣ್
ಇವರು ಫೆ. 14 ರ ಭಾನುವಾರದಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಅಂದು ಅವರು ಮಧ್ಯಾಹ್ನ 1 ಗಂಟೆಗೆ ಮಾನ್ಯ
ಮುಖ್ಯಮಂತ್ರಿಗಳೊಂದಿಗೆ ಹೆಲಿಕಾಫ್ಟರ್ ಮೂಲಕ
ಬೆಂಗಳೂರಿನ ಹೆಚ್. ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು 2
ಗಂಟೆಗೆ ನ್ಯಾಮತಿ ತಾಲ್ಲೂಕಿನ
ಸೂರಮಗೊಂಡನಕೊಪ್ಪಕ್ಕೆ ಆಗಮಿಸುವರು.
ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸಂತ
ಸೇವಾಲಾಲ್ರವರ 282ನೇ ಜಯಂತಿ ಕಾರ್ಯಕ್ರಮದಲ್ಲಿ
ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು.
ಸಂಜೆ 6 ಗಂಟೆಗೆ ದಾವಣಗೆರೆ ತ್ರಿಶೂಲ್ ಕಲಾಭವನದಲ್ಲಿ ಮಾಜಿ
ಶಾಸಕರಾದ ಎಂ.ಬಸವರಾಜ್ನಾಯ್ಕ್ ಇವರ ಮಗಳ ವಿವಾಹ
ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ 7.15 ಕ್ಕೆ
ದಾವಣಗೆರೆಯಿಂದ ರಸ್ತೆ ಮೂಲಕ ಕೇಂದ್ರ ಸ್ಥಾನ
ಬೆಂಗಳೂರಿಗೆ ತೆರುಳುವರು ಎಂದು ಸಚಿವರ ವಿಶೇಷ
ಕರ್ತವ್ಯಾಧಿಕಾರಿ ಸಿದ್ದಲಿಂಗೇಶ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.