ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಗಾದಿಗಾಗಿ ಚುನಾವಣೆ ನಡೆದಿತ್ತು.ಕಾಂಗ್ರೆಸ್ ಪಕ್ಷದದಿಂದ ಐದು ಜನ, ಬಿಜೆಪಿ ಪಕ್ಷದಿಂದ ಐದು ಜನ ಸದಸ್ಯರಾಗಿ ಆಯ್ಕೆಯಾಗಿದ್ದರು ಅಧ್ಯಕ್ಷರ ಗಾದಿಗಾಗಿ ಜಿದ್ದಾಜಿದ್ದಿ ಎರಡು ಪಕ್ಷಗಳ ಮಧ್ಯೆ ಏರ್ಪಟ್ಟಿತ್ತು ಲಾಟರಿ ಮುಖಾಂತರ ಚುನಾವಣಾಧಿಕಾರಿಗಳು ಲಾಟರಿ ಎತ್ತುವ ಮೂಲಕ ಅದರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅನಿತಾ ರಾಜಪ್ಪ, ಅಧ್ಯಕ್ಷ ರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರವೀಣ್ ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.ನಂತರ 12-2-2021ರಂದು ಇಂದು ಪಲವನಹಳ್ಳಿ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಯಿತು. ಆ ಸಭೆಯಲ್ಲಿ ಪಿಡಿಓ ವಿಜಯ್ ಕುಮಾರ್ ,ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇತೃತ್ವದಲ್ಲಿ ಸಭೆ ನಡೆಯಿತು. ಆ ಸಭೆಯಲ್ಲಿ ಕಾಮಗಾರಿಯ ಬಗ್ಗೆ ಕುಡಿಯುವ ನೀರು ,ಒಳಚರಂಡಿ ,ಉದ್ಯೋಗ ಖಾತ್ರಿ ಯೋಜನೆ, NRIG ಇನ್ನು ಮುಂತಾದ ಯೋಜನೆಯ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಲಾಯಿತು. ಅಧ್ಯಕ್ಷರು ಮತ್ತು ಉಪಧ್ಯಾಕ್ಷರು ಎರಡು ಜನ ಗಂಜಿನಹಳ್ಳಿ ಒಂದೇ ಗ್ರಾಮದಿಂದ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಈ ಸಭೆಯಲ್ಲಿ ಪಿಡಿಒ ವಿಜಯಕುಮಾರ್, ಅಧ್ಯಕ್ಷರಾದ ಅನಿತಾ ರಾಜಪ್ಪ, ಉಪಾಧ್ಯಕ್ಷರಾದ ಪ್ರವೀಣ್, ಸದಸ್ಯರುಗಳಾದ ಪ್ರಕಾಶ್ ನಾಯ್ಕ ಮುಸ್ಸೇನಾಳ ಗೋವಿಂದರಾಜ್ ,ನಟರಾಜ್, ನಾಗೇಶ್ ನಾಯಕ್, ನೇತ್ರಮ್ಮ ,ಜಯಶ್ರೀ, ಪ್ರೀತಿ ಶಕುಂತಲಾಬಾಯಿ ,ಇನ್ನುಮುಂದಾದರೂ ಸಹ ಭಾಗಿಯಾಗಿದ್ದರು