ದಾವಣಗೆರೆ ಫೆ.12
ಮಲೆಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ
ಧರಣೇಂದ್ರÀ್ಕುಮಾರ್.ಡಿ.ಎನ್ ಇವರನ್ನು ಕರ್ತವ್ಯ ಲೋಪದ
ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಲೆಬೆನ್ನೂರು ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ
ಇವರು ಮಲೇಬೆನ್ನೂರು ಪುರಸಭೆಯಲ್ಲಿ ನಿಯೋಜನೆ
ಮೇಲೆ ಕಾರ್ಯ ನಿರ್ವಹಿಸುತ್ತಿದ್ದು 2020-21 ನೇ ಸಾಲಿನ
ಹದಿನೈದನೇ ಹಣಕಾಸಿನ ಯೋಜನೆಯಡಿ ಕ್ರಿಯಾ ಯೋಜನೆಗೆ
ಮಂಜೂರಾತಿ ನೀಡುವ ಆದೇಶದಲ್ಲಿನ ಕಾಮಗಾರಿಗಳಲ್ಲಿ ಇ-
ಪ್ರಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್ ಆಹ್ವಾನಿಸಲು
ಆದೇಶಿಸಲಾಗಿದ್ದು, ಸದರಿ ಆದೇಶವನ್ನು ಉಲ್ಲಂಘಿಸಿ 
ಮ್ಯಾನ್ಯುಯಲ್ ಟೆಂಡರ್ ಮುಖಾಂತರ ಸ್ಥಳೀಯ ದಿನ
ಪತ್ರಿಕೆಯಲ್ಲಿ ಪ್ರಕಟಿಸಿ ಕರ್ನಾಟಕ ಪಾರದರ್ಶಿಕತೆ
ಅಧಿನಿಯಮ 2000 ನಿಯಮ (17) ರಂತೆ ಕೆ.ಡಬ್ಲೂ-1 ಪ್ರಕಾರ
ಟೆಂಡರ್ ಅವಧಿಯನ್ನು 15 ದಿನಗಳಿಗೆ ನಿಗದಿಪಡಿಸಿದ್ದರೂ

ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ 45 ದಿನಗಳ
ದೀರ್ಘಾವಧಿ ಟೆಂಡರನ್ನು ಆಹ್ವಾನಿಸಿದ್ದು, ಸದರಿ
ಪ್ರಕಟಣೆಯನ್ನು ರಾಜ್ಯ ಮಟ್ಟದ ದಿನ ಪತ್ರಿಕೆಯಲ್ಲಿ ನೀಡದೇ
ಸ್ಥಳೀಯ ದಿನಪತ್ರಿಕೆಯಲ್ಲಿ ಮಾತ್ರ ಪ್ರಕಟಿಸಿ ಟೆಂಡರ್
ಪ್ರಕಟಣೆಯನ್ನು ಮುಕ್ತವಾಗಿ ಪ್ರಚುರ ಪಡಿಸದೇ
ಇರುವುದು ಕಂಡುಬಂದಿದ್ದು ಸಹಾಯಕ ಕಾರ್ಯಪಾಲಕ
ಅಭಿಯಂತರರು ಜಿಲ್ಲಾ ನಗರಾಭಿವೃದ್ದಿ ಕೋಶ ಇವರ
ತನಿಖಾ ವರದಿಯಂತೆ ಮುಖ್ಯಾಧಿಕಾರಿ ಧರಣೇಂದ್ರ
ಕುಮಾರ್.ಡಿ.ಎನ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ
ಸೇವೆಯಿಂದ ನಿಲಂಬನೆಯಲ್ಲಿಟ್ಟು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *