ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೆವಾಂಗ ಸಮಾಜದವತಿಂದ ದೆವಾಂಗ ಅಭಿವೃದ್ದಿ ನಿಗಮ ಸ್ಥಾಪಿಸಿ ಶ್ರೀ ದೇವಾಂಗ (ದೇವಲ) ಮಹರ್ಷಿ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಹೊನ್ನಾಳಿ ತಾಲೂಕಿನ ದೇವಾಂಗ ಸಮಾಜದ ಮುಖಂಡರಾದ ಡಾ// ಶಿವಪ್ಪ ಡಿ ರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,ಅವರು ಕರ್ನಾಟಕ ರಾಜ್ಯದಲ್ಲಿ ದೇವಾಂಗ ಸಮಾಜವು ಸುಮಾರು 30 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಸಮಾಜದ ಗುರುಪೀಠ ಅಖಿಲ ಭಾರತೀಯ ದೇವಾಂಗ ಜಗದ್ಗುರು. ಶ್ರೀ ಗಾಯಿತ್ರಿ ಪೀಠವು
ಹಂಪಿಯಲ್ಲಿ ಇದ್ದು ಜಗದ್ಗುರುಗಳಾದ ಶ್ರೀಶ್ರೀಶ್ರೀ ದಯಾನಂದಪುರಿ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಸಾಗುತ್ತಿದೆ.
ನಮ್ಮ ಕುಲಕಸುಬು ನೇಕಾರಿಕೆಯು ನಷ್ಟದ ಉದ್ದಿಮೆ ಆಗಿರುವುದರಿಂದ ನಮ್ಮವರು ಅನೇಕ ವರ್ಷಗಳಿಂದ ನೇಕಾರಿಕೆ ವೃತ್ತಿ
ತ್ಯಜಿಸಿ ಬೇರೆ ಬೇರೆ ಅಂದರೆ ಕೃಷಿ ಕೂಲಿ ಕಾರ್ಮಿಕರು, ಕೂಲಿಕಾರರು, ವ್ಯಾಪಾರಿಗಳು, ಟೀ ಅಂಗಡಿ ಬೀಡಾ ಅಂಗಡಿ, ಬೀದಿ
ಬದಿ ವ್ಯಾಪಾರಿಗಳಾಗಿ ಮಾರ್ಪಟ್ಟಿದ್ದು ನಮ್ಮ ಸಮಾಜವು ತುಂಬಾ ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಸಮಾಜವು
ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣೆಕವಾಗಿ ಬಹಳಷ್ಟು ಹಿಂದುಳಿದಿದೆ, ಎಂದು ತಿಳಿಸಲು ವಿಷಾದಿಸುತ್ತೇವೆ.
ನಮ್ಮ ಸಮಾಜದ ಜನಾಂಗದ ಕಷ್ಟಕಾರ್ಪಣ್ಯಗಳನ್ನು ಸಮಾಜದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ತಮಗೆ ಹಾಗೂ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿರುತ್ತೇವೆ. ಆದರೆ ಯಾವುದೇ ಪ್ರಯೋಜನವಾಗಿರುವುದಿಲ್ಲ ಹಿಂದುಳಿದ ವರ್ಗಗಳ ಇಲಾಖೆಯಲ್ಲಿನ 2ಎ ವರ್ಗದಲ್ಲಿದ್ದ ನಮ್ಮ ಸಮಾಜದ ವಿಶೇಷ ಮೀಸಲು ಸಹ ರದ್ದಾಗಿದೆ. ನಮ್ಮ ಸಮಾಜದ ಕೆಲ ಮುಖಂಡರು ರಾಜಕಾರಣೆಗಳು ತಮ್ಮ ರಾಜಕೀಯ ಜೀವನಕ್ಕಾಗಿ ನೇಕಾರ ಸಮುದಾಯ ಎಂಬ ತಲೆಬರಹದ ಅಡಿ ಹೇಳಿಕೆಗಳನ್ನು ಕೊಡುತ್ತ, ನಮ್ಮ ದೇವಾಂಗ ಸಮಾಜವನ್ನು ಹಿಂದಕ್ಕೆ ತಳ್ಳುತ್ತಿರುವುದು ಸರಿಯಷ್ಟೆ ಕಾರಣ ನೇಕಾರ ಸಮುದಾಯವೆಂದರೆ ಬರೀ ದೇವಾಂಗ ಸಮುದಾಯವಲ್ಲ ನೇಕಾರ ವೃತಿಗಳನ್ನು ಅವಲಂಬಿಸಿರುವವರೆಲ್ಲರೂ ನೇಕಾರರೇ ಇದರಲ್ಲಿ ಅನೇಕ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯ ಸಮುದಾಯದವರೂ
ಸೇರಿದ್ದಾರೆ. ಸರ್ಕಾರವು ಈಗಾಗಲೇ ನೇಕಾರ ಅಭಿವೃದ್ದಿ ನಿಗಮ, ಕೈಮಗ್ಗ ಅಭಿವೃದ್ಧಿ ನಿಗಮಗಳನ್ನು ಮಾಡಿದೆ. ಆದರೆ ಇವುಗಳಲ್ಲಿ ಸೌಲಭ್ಯಗಳು ಸಿಗುವುದು ನೇಕಾರ ವೃತ್ತಿ ಅವಲಂಬಿತರಿಗೆ ಮಾತ್ರ, ಈ ಅಂಶ ದೇವಾಂಗ ಸಮಾಜದ ಗಮನಕ್ಕೆ ಬಂದಿದೆ, ಹಾಗಾಗಿ ಈಗಾಗಲೇ ಮಹಾರಾಷ್ಟ ಸರ್ಕಾರವು ಪ್ರವರ್ಗ 2 ಎ ನಲ್ಲಿ ಇದ್ದ ದೇವಾಂಗ ಸಮಾಜಕ್ಕೆ ಶೇಕಡ 2 ರಷ್ಟು ಮೀಸಲಾತಿ ನೀಡಿದೆ. ಅದರಂತೆ ತಮಿಳುನಾಡು ಸರ್ಕಾರವು ಮೀಸಲಾತಿ ನೀಡಿದೆ, ಇದಕ್ಕಿಂತ ಒಂದು ಹೆಜ್ಜೆ
ಮುಂದಿಟ್ಟಿರುವ ಆಂದ್ರಪ್ರದೇಶ ಸರ್ಕಾರವು ದೇವಾಂಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ , ನಮ್ಮ ದೇವಾಂಗ ಸಮಾಜದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ. ನಮ್ಮ ರಾಜ್ಯ ಸರ್ಕಾರವು ಕೂಡ ಈಗಾಗಲೇ ಲಿಂಗಾಯಿತರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ,ಮಾದಿಗರ ಅಭಿವೃದ್ಧಿ ನಿಗಮ ,ಲಂಬಾಣಿ ಅಭಿವೃದ್ಧಿ ನಿಗಮ, ಹೀಗೆ ಅನೇಕ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಹಿಂದುಳಿದ ನಮ್ಮ ಸಮಾಜಕ್ಕೆ ಅನ್ಯಾಯವೆಸಗುತ್ತಿವೆ ಎಂದು ಅನಿಸುತ್ತಿದೆ. ಹಾಗಾಗಿ ಈ
ಮೂಲಕ ಸರ್ಕಾರದ ಗಮನಕ್ಕೆ ತರಲು ಬಯಸುವುದೇನೆಂದರೆ ನಮ್ಮ ಸಮುದಾಯಕ್ಕೂ ಪ್ರತ್ಯೇಕ ದೇವಾಂಗ ಅಭಿವೃದ್ಧಿ
ನಿಗಮ ವನ್ನು ಸ್ಥಾಪಿಸಿ, ಶ್ರೀ ದೇವಾಂಗ(ದೇವಲ) ಮಹರ್ಷಿ ಜಯಂತಿಯನ್ನು ಸರ್ಕಾರದ ವತಿಯಿದ ಆಚರಿಸುವಂತೆ ಒತ್ತಾಯಿಸಿ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ದೇವಾಂಗ ಸಮಾಜದ ವತಿಯಿಂದ ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕುಗಳ ದಂಢಾಧಿಕಾರಿಗಳಿಗೆ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ತಲುಪಿಸುವಂತೆ ಮನವಿ ಮಾಡಿಕೊಂಡರು.
ಈ ಸಭೆಯಲ್ಲಿ ಬಾಗಿಯಾದವರು ದೇವಾಂಗ ಸಮಾಜದ ಅಧ್ಯಕ್ಷರಾದ ಚಂದ್ರಪ್ಪ ಎಮ್,ಕಾರ್ಯದರ್ಶಿಯವರಾದ ಶ್ರೀನಿವಾಸ ವಾಸದೇವ ನೇಕಾರ ಸಂಘದ ಕಾರ್ಯದರ್ಶಿ,ದೇವಾಂಗ ಸಮಾಜದ ಮುಕಂಡರಾದ ಡಾ// ಶಿವಪ್ಪ ಡಿ ರವರು ಹಾಗು ಶಿವಾನಂದಪ್ಪ ಸೊರಟೂರ್, ಇನ್ನೂ ಮುಂತಾದ ಸಮಾಜದ ಮುಖಂಡರು ಸಹ ಬಾಗಿಯಗಿದ್ದರು

Leave a Reply

Your email address will not be published. Required fields are marked *