ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿರುವ ಉರ್ದು ಪ್ರೌಢಶಾಲೆಯಲ್ಲಿ ಬಾಲ್ಯವಿವಾಹ ನಿಷೇಧದ ಬಗ್ಗೆ ಸಮಾಜ ವಿಜ್ಞಾನ ಶಿಕ್ಷಕಿಯಾದ ಸಂಶಿರಾ ಬೇಗಮ್ ರವರು ಮತ್ತು ಮುಖ್ಯೋಪಾಧ್ಯಾಯರಾದ ಶಕೀಲ್ ಅಹ್ಮದ್ ರವರು ಎಲ್ಲಾ ಶಿಕ್ಷಕರುಗಳಿಂದ ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ಪ್ರತಿಜ್ಞೆ ಮಾಡುವುದರ ಮೂಲಕ ಮಕ್ಕಳುಗಳಿಗೆ ಅರಿವು ಮೂಡಿಸುವ ನೂತನ ಕಾರ್ಯಕ್ರಮ ಮಾಡಲಾಯಿತು.
ನಂತರ ಮುಖ್ಯೋಪಾಧ್ಯಾಯರಾದ ಶಕೀಲ್ ಅಹಮದ್ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಬಾಲ್ಯವನ್ನು ಯಾರು ಕೂಡ ಮಾಡಿಕೊಳ್ಳಬಾರದು. ಚಿಕ್ಕ ವಯಸ್ಸಿನವರು ಮದುವೆ ಮಾಡಿಕೊಂಡರೆ ಏನು ಪ್ರಮಾದ ಆಗುತ್ತದೆ ಎಂದು ಸವಿಸ್ತಾರವಾಗಿ ಬಾಲ್ಯವಿವಾಹವನ್ನು ಹೇಗೆ ತಡೆಗಟ್ಟಬೇಕು ಎಂದು ಮಕ್ಕಳುಗಳಿಗೆ ಜ್ಞಾನವನ್ನು ಉಣಪಡಿಸುತ್ತಾ,
ಕಾನೂನು ಮತ್ತು ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರು ತಮ್ಮ ತಮ್ಮ ತಂದೆತಾಯಿಗಳಿಗೆ ಇಂತಹ ಬಾಲ್ಯವಿವಾಹ ಮಾಡುವುದನ್ನು ನಿಲ್ಲಿಸಬೇಕೆಂದು ತಂದೆತಾಯಿಗಳಿಗೆ ಸಹ ನೀವು ಹೇಳುವುದರ ಜೊತೆಗೆ ಇಂತಹ ಬಾಲ್ಯವಿವಾಹ ಕ್ಕೆ ಸಹಕಾರ ಮಾಡಬಾರದು ನೀಡಿದವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳುತ್ತಾ ಮಾತನ್ನು ಮುಗಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಕೀಲ್ ಆಹ್ಮದ್ ,ಸಹ ಶಿಕ್ಷಕರಾದ ಸಾಯಿರಾಬಾನು, ಮಹಮ್ಮದ್ ಆಯಾತಾಉಲ್ಲಾ, ನಾಜೀಮಾ ಬಾನು, ನಗ್ಮಾ ಆರ್,ಕುಮಾರ್ ದೇವಾಂಗದ್, ಬಸವರಾಜ್ ಕೊಡದ್, ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹ ಭಾಗಿಯಾಗಿದ್ದರು.