ಜಗಳೂರು ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 2021-22 ನೇ
ಸಾಲಿನ  ಆಯ-ವ್ಯಯ ತಯಾರಿಸುವ ಸಂಬಂಧ ಸಾರ್ವಜನಿಕವಾಗಿ
ಬಜೆಟ್ ಪೂರ್ವಭಾವಿ ಸಮಾಲೋಚನೆ ಸಭೆ ಫೆ. 25 ರಂದು
ಬೆಳಿಗ್ಗೆ 11 ಗಂಟೆಗೆ ಪಟ್ಟಣ ಪಂಚಾಯಿತಿಯ ಕೌನ್ಸಿಲ್
ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್
ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಅವರು ವಹಿಸುವರು. 2021-22 ನೇ
ಸಾಲಿನ   ಜಗಳೂರು ಪಟ್ಟಣ ಪಂಚಾಯಿತಿಯ ಆಯ-ವ್ಯಯ
ತಯಾರಿಸುವ ಸಂಬಂಧ ಸಾರ್ವಜನಿಕವಾಗಿ ಸಮಾಲೋಚನೆ
ಮಾಡಲು ನೊಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು,
ನೊಂದಾಯಿತ ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ
ಮತ್ತು ಕೈಗಾರಿಕಾ ಸಂಘಗಳು ಹಾಗೂ ಇತರೆ ಸಂಘ
ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪಟ್ಟಣದ ಪ್ರಮುಖ
ನಾಗರೀಕರನ್ನು ಒಳಗೊಂಡಂತೆ ಸಾರ್ವಜನಿಕ
ಚರ್ಚಾಸಭೆಯನ್ನು ನಡೆಸಲಾಗುವುದೆಂದು ಪಟ್ಟಣ
ಪಂಚಾಯಿತಿಯ ಮುಖ್ಯಾಧಿಕಾರಿ ರಾಜು ಬಣಕಾರ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *