ಉಸ್ತುವಾರಿ ಸಮಿತಿಗೆ ಅರ್ಜಿ ಆಹ್ವಾನ
ದಾವಣಗೆರೆ, ಫೆ.23
ಅನುಸೂಚಿತ ಜಾತಿ ಮತ್ತು ಬುಡಕಟ್ಟು ನಿಯಮ (1995)
17ರ ಪ್ರಕಾರ ಈ ಹಿಂದೆ ರಚಿಸಲಾದ ಜಿಲ್ಲಾ ಮಟ್ಟದ ಜಾಗೃತಿ
ಮತ್ತು ಉಸ್ತುವಾರಿ ಸಮಿತಿಯ ಅವಧಿ ಮುಕ್ತಾಯವಾಗಿದ್ದು,
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಸಮಿತಿಯ ಪುನರ್ ರಚನೆ
ಮಾಡಲು ಉದ್ದೇಶಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅನುಸೂಚಿತ ಜಾತಿ ಮತ್ತು ಬುಡಕಟ್ಟು ನಿಯಮ (1995)
17ರ ಪ್ರಕಾರ ದೌರ್ಜನ್ಯಕ್ಕೆ ಒಳಗಾದವರಿಗೆ ಒದಗಿಸಲಾದ
ಪರಿಹಾರವನ್ನು ಹಾಗೂ ಪುನರ್ವಸತಿ ಸೌಕರ್ಯಗಳನ್ನು
ಮತ್ತು ಅದಕ್ಕೆ ಸಂಬಂದಿಸಿದ ಇತರೆ ವಿಷಯಗಳನ್ನು
ಅಧಿನಿಯಮ ಮೇರೆಗಿನ ಮೊಕದ್ದಮೆಗಳ ಪ್ರಾಸಿಕ್ಯೂಷನ್
ಉಪಬಂಧಗಳನ್ನು ಅನುಷ್ಠಾನಗೊಳಿಸುವುದಕ್ಕೆ
ಜವಾಬ್ದಾರರಾದ ವಿವಿಧ ಅಧಿಕಾರಿಗಳ, ಏಜೆನ್ಸಿಗಳ ಪಾತ್ರವನ್ನು
ಮತ್ತು ಜಿಲ್ಲಾಡಳಿತವು ಸ್ವೀಕರಿಸಿದ ವಿವಿಧ ವರದಿಗಳನ್ನು
ಪುನರವಲೋಕಿಸಲು ಜಿಲ್ಲಾ ಮಟ್ಟದ ಜಾಗೃತಿ ಮತ್ತು
ಉಸ್ತುವಾರಿ ಸಮಿತಿಯನ್ನು ರಚಿಸಲಾಗಿತ್ತು. ಜಿಲ್ಲೆಯಲ್ಲಿ ಈ ಹಿಂದೆ
ರಚಿಸಲಾದ ಸಮಿತಿಯ ಅವಧಿಯು ಮುಕ್ತಾಯಗೊಂಡಿದ್ದು
ಸಮಿತಿಯನ್ನು ಪುನರ್ರಚಿಸಲು ಸಮಿತಿಯ ಅಧಿಕಾರೇತರ
ಸದಸ್ಯರನ್ನಾಗಿ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳಿಗೆ
ಸೇರಿದ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಪರ್ಕ
ಹೊಂದಿರುವ 5 ಜನ ಹಾಗೂ ಅನುಸೂಚಿತ ಜಾತಿ ಮತ್ತು
ಬುಡಕಟ್ಟು ಅಲ್ಲದ 3 ಜನ ಸದಸ್ಯರನ್ನು ಆಯ್ಕೆ ಮಾಡಲು
ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾ. 10 ಕೊನೆಯ
ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವವರು ಅನುಸೂಚಿತ ಜಾತಿ ಮತ್ತು
ಬುಡಕಟ್ಟುಗಳ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ
ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಬಗ್ಗೆ
ಪಡೆದ ದೃಢೀಕರಣ ಪ್ರಮಾಣಪತ್ರ ಕಡ್ಡಾಯವಾಗಿ
ಸಲ್ಲಿಸಬೇಕು. ವಿದ್ಯಾರ್ಹತೆ ದೃಢೀಕೃತ ಪ್ರಮಾಣಪತ್ರ,
ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರದೇ
ಇರುವುದಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯಿಂದ
ಗಣಕೀಕೃತ ವರದಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಹಾಗೂ
ಬುಡಕಟ್ಟು ಜನಾಂಗದ ಉನ್ನತಿಗಾಗಿ ಇರುವ ಸರ್ಕಾರದ
ಯೋಜನೆಗಳ ಕಾಯ್ದೆಯ ಜ್ಞಾನವನ್ನು ಹೊಂದಿರಬೇಕು.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ
ಸಲ್ಲಿಸಬೇಕು. ಯಾವುದೇ ಸರ್ಕಾರಿ/ ಅರೆಸರ್ಕಾರಿ/ ಮಂಡಳಿ/
ನಿಗಮ/ ಇತರೆ ಸರ್ಕಾರಿ ನೌಕರರಾಗಿರಬಾರದು. ಅರ್ಜಿಯನ್ನು
ಮಾ. 10 ರೊಳಗೆ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ
ಇಲಾಖೆ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ದಾವಣಗೆರೆ ಇಲ್ಲಿಗೆ
ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾದಿ ಗ್ರಾಮೋದ್ಯೋಗ ಕಾರ್ಯಚಟುವಟಿಕೆಗಳಿಗೆ
ಚಾಲನೆ
ದಾವಣಗೆರೆ, ಫೆ.23
ಖಾದಿ ಗ್ರಾಮ್ಯೋದ್ಯೋಗ ಆಯೋಗ ಬೆಂಗಳೂರು
ಇವರಿಂದ ಹÀರಿಹರ ಚರಕಾ ಮತ್ತು ಗ್ರಾಮ್ಯೋದ್ಯೋಗ
ಸಹಕಾರ ಸಂಘ ನಿಟ್ಟುವಳ್ಳಿ ದಾವಣಗೆರೆ ಇವರಿಗೆ 2016-17ನೇ
ಸಾಲಿನಲ್ಲಿ ಮಂಜೂರಾದ ಸಾಂಪ್ರಾದಾಯಿಕ ಉದ್ದಿಮೆಗಳ
ಪುನಶ್ಚೇತನ ನಿಧಿ (ಎಸ್ಎಫ್ಯುಆರ್ಟಿಐ) ಯೋಜನೆಯಡಿ
ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು
ಕೇಂದ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ
ಇವರು ನವದೆಹಲಿಯಿಂದ ಫೆ. 22 ರ ಸಂಜೆ 5.40 ಕ್ಕೆ ವಿಡಿಯೋ
ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೆ. ಬಸಪ್ಪ,
ಉಪಾಧ್ಯಕ್ಷೆ ಎ.ಆರ್ ಪುಟ್ಟಮ್ಮ ಸಂಘದ ಕಾರ್ಯದರ್ಶಿ ಎಂ.ಎಸ್
ರಮೇಶ್ ಖಾದಿ ಗ್ರಾಮ್ಯೋದ್ಯೋಗ ಆಯೋಗದ ಅಧಿಕಾರಿ ಪಿ.ಜೆ
ನಿಂಜ್ಮೆ, ಸಹಾಯಕ ನಿರ್ದೇಶಕರಾದ ರಾಹುಲ್ದಾಸ್,
ಕಾರ್ಯನಿರ್ವಾಹಕರಾದ ಸಿ.ನವೀನ್ಕುಮಾರ್, ಜಿಲ್ಲಾ ಅಭಿವೃದ್ಧಿ
ಅಧಿಕಾರಿಗಳು, ಖಾದಿ ಮಂಡಳಿ ಮತ್ತಿತ್ತರು ಉಪಸ್ಥಿತರಿದ್ದರು
ಎಂದು ಖಾದಿ ಮಂಡಳಿಯ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.