ಹೆಚ್.ಎ.ಎಲ್. ಬೆಂಗಳೂರು ಇವರ ವತಿಯಿಂದ ಮೂರು
ವರ್ಷದ ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರುವ
ಅಭ್ಯರ್ಥಿಗಳಿಗೆ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಡಿಪ್ಲೋಮ ಇನ್ ಏರೋನಾಟಿಕಲ್
ಎಂಜಿನಿಯರಿಂಗ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್,
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್, ಸಿವಿಲ್, ಕಂಪ್ಯೂಟರ್ ಸೈನ್ಸ್
/ಇನ್‍ಫರ್‍ಮೇಶನ್ ಸೈನ್,್ಸ ಮೆಟಲರ್ಜಿ &ಚಿmಠಿ; ಕಮರ್ಶಿಯಲ್ ಪ್ರ್ಯಾಕ್ಟಿಸ್
ತರಬೇತಿಗಳಲ್ಲಿ ತೇರ್ಗಡೆ ಹೊಂದಿರಬೇಕು. ಅರ್ಜಿಯನ್ನು
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದಾವಣಗೆರೆ ಇಲ್ಲಿ ಪಡೆದು,
ಭರ್ತಿ ಮಾಡಿದ ಅರ್ಜಿಯನ್ನು ಮಾ.10 ಸಂಜೆ 5 ಗಂಟೆಯೊಳಗೆ
ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ,
ಜಿಲ್ಲಾ ಆಡಳಿತ ಭವನ, ದಾವಣಗೆರೆ ಅಥವಾ ದೂ.ಸಂ: 08192-259446
ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ
ಕೇಂದ್ರ ಉದ್ಯೋಗಾಧಿಕಾರಿ ಗಿರೀಶ್ ಕೆ.ಎನ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.