ದಾವಣಗೆರೆ,ಫೆ.25
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ
ರಾಜ್ಯದಾದ್ಯಂತ ಮಾರ್ಚ್ 2021ನೇ ಮಾಹೆಯಲ್ಲಿ ರಾಜ್ಯದ ಕ್ರೀಡಾ
ವಿಜ್ಞಾನ ಸಂಸ್ಥೆಯಿಂದ (Sಠಿoಡಿಣs Sಛಿieಟಿಛಿe) 8 ರಿಂದ 13 ವರ್ಷ
ವಯೋಮಾನದೊಳಗಿನ ವಯೋಮಿತಿಯ
ಬಾಲಕ/ಬಾಲಕಿಯರಿಗೆ ವೈಜ್ಞಾನಿಕವಾಗಿ ಆಯ್ಕೆ
ಪ್ರಕ್ರಿಯೆಯನ್ನು ನಡೆಸಿ ಪ್ರತಿಭಾನ್ವಿತ
ಕ್ರೀಡಾಪಟುಗಳನ್ನು ಗುರುತಿಸಲಿದ್ದಾರೆ.
ಜಿಲ್ಲೆಯಲ್ಲಿ ಮಾ.05 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30
ರವರೆಗೆ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ

ಸಂಘಟಿಸಲಾಗುವುದು. 08 ರಿಂದ 13 ವರ್ಷ
ವಯೋಮಾನದೊಳಗಿನ ವಯೋಮಿತಿಯ
ಬಾಲಕ/ಬಾಲಕಿಯರು ತಮ್ಮ ಜನ್ಮ ದಿನಾಂಕ, ಆಧಾರ್ ಕಾರ್ಡ್ ದಾಖಲೆ
ಸಲ್ಲಿಸಬೇಕು. ಪ.ಜಾತಿ/ಪ.ಪಂ ಕ್ಕೆ ಸೇರಿದ ಕ್ರೀಡಾಪಟುಗಳು
ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಮಾ.03
ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ
ಕ್ರೀಡಾಂಗಣ ಕಚೇರಿ ಅವಧಿಯಲ್ಲಿ ದಾಖಲೆಗಳನ್ನು
ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ,
ದಾವಣಗೆರೆ ದೂ.ಸಂ: 08192-237480, ಮೊ.ಸಂ: 9480796263,
7019565606ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ

ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *