ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ
ಕರ್ನಾಟಕ
ಲೋಕಸೇವಾ ಆಯೋಗವು ದಿ:28/02/2021 ರಂದು ಸಹಾಯಕರು/
ಪ್ರಥಮದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದ್ದು, ಅಭ್ಯರ್ಥಿಗಳು
ಆಯೋಗವು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ
ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎಲ್ಲಾ ಅಭ್ಯರ್ಥಿಗಳು ಹೊಸ ಪ್ರವೇಶ ಪತ್ರವನ್ನು
ಕಡ್ಡಾಯವಾಗಿ ತರುವುದು. ವಿದ್ಯುನ್ಮಾನ ಉಪಕರಣಗಳನ್ನು
ನಿಷೇಧಿಸಿದ್ದು, ಮೊಬೈಲ್ ಹಾಗೂ ಸ್ಮಾರ್ಟ್ ವಾಚ್‍ಗಳ ಬಳಕೆಯನ್ನು
ನಿಷೇಧಿಸಿದೆ. ಅಭ್ಯರ್ಥಿಯ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ
(ಚುನಾವಣಾ ಐಡಿ/ಆಧಾರ್ ಕಾರ್ಡ್ ಇನ್ನಿತರೆ) ಗಳನ್ನು ಪ್ರವೇಶಪತ್ರದ
ಜೊತೆಗೆ ಹಾಜರುಪಡಿಸುವುದು ಕಡ್ಡಾಯ. ಪರೀಕ್ಷೆಗೆ 1 ಗಂಟೆ
ಮುನ್ನ ಪರೀಕ್ಷಾ ಕೇಂದ್ರದೊಳಗೆ ಹಾಜರಿರಬೇಕು ಮತ್ತು
ಪರೀಕ್ಷೆ ಪೂರ್ಣಗೊಳ್ಳುವವರೆಗೂ ಪರೀಕ್ಷಾ ಕೊಠಡಿಯಲ್ಲಿ
ಕಡ್ಡಾಯವಾಗಿ ಹಾಜರಿರಬೇಕು.. ಅಭ್ಯರ್ಥಿಗಳು ಪ್ರವೇಶ ಪತ್ರ,
ಓಎಮ್‍ಆರ್/ ಪ್ರಶ್ನೆಸಹಿತ ಉತ್ತರಪತ್ರಿಕೆ ಮತ್ತು ಪ್ರಶ್ನೆ
ಪತ್ರಿಕೆಯಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ
ಪಾಲಿಸುವುದು ಹಾಗೂ ಅಭ್ಯರ್ಥಿಗಳು ಆಯೋಗದಿಂದ ಕಾಲಕಾಲಕ್ಕೆ
ಹೊರಡಿಸಲಾಗುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ
ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.