ದಾವಣಗೆರೆ ಮಾ.02
ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ
ಗ್ರಾಹಕರು ಅದರಲ್ಲಿ ಬಿಐಎಸ್(ಬ್ಯೂರೋ ಆಫ್ ಇಂಡಿಯನ್
ಸ್ಟ್ಯಾಂಡಡ್ರ್ಸ್)ಮಾರ್ಕ್ ಅಥವಾ ಅಧಿಕೃತ ದೃಢೀಕರಣ ಇರುವ
ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಹೇಳಿದರು.
ಮಂಗಳವಾರ ನಗರದ ಪೂಜಾ ಇಂಟರ್ ನ್ಯಾಷನಲ್
ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ
ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ
ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರ
ಸಂಯೋಜನೆಯೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸುರಕ್ಷತೆ, ಪರಿಸರ ಸಮತೋಲನ ಸೇರಿದಂತೆ
ಒಟ್ಟಾರೆ ಸುರಕ್ಷತೆ ಹಿನ್ನೆಲೆಯಲ್ಲಿ ಜನರು ಬಳಸುವ
ವಸ್ತ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ ದೃಢೀಕರಿಸುವುದು
ಅತ್ಯವಶ್ಯವಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಬ್ಯೂರೋ
ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಮೂಲಕ ಗ್ರಾಹಕರ
ವಸ್ತಗಳನ್ನು ಪರೀಕ್ಷೆ ಮಾಡಿ, ಗುಣಮಟ್ಟ ನಿರ್ಧರಿಸಿ
ಧೃಢೀಕರಿಸುವ ಕೆಲಸ ಮಾಡುತ್ತಿದೆ.
ಯಾವುದೇ ಉತ್ಪಾದಕರು ಬಿಎಸ್ಐ ಸರ್ಟಿಫಿಕೇಷನ್ ಇಲ್ಲದೇ
ವಸ್ತುಗಳನ್ನು ಉತ್ಪಾದಿಸುವುದು, ಸಂಗ್ರಹಿಸುವುದು,
ಸಾಗಿಸುವುದು ಮತ್ತು ಮಾರಾಟ ಮಾಡುವುದು ಸೇರಿದಂತೆ
ಯಾವುದೇ ಚಟುವಟಿಕೆ ಕೈಗೊಳ್ಳುವುದು
ಅಪರಾಧವಾಗುತ್ತದೆ. ಆದ್ದರಿಂದ ಎಲ್ಲ ಉತ್ಪಾದಕರು ತಮ್ಮ
ಉತ್ಪನ್ನಗಳಿಗೆ ಬಿಎಸ್ಐ ದೃಢೀಕರಣ ಪಡೆಯಬೇಕು ಎಂದರು.
ಪ್ಯಾಕೇಜ್ಡ್ ಮಿನರಲ್ ಕುಡಿಯುವ ನೀರು, ಸಿಮೆಂಟ್,
ಗೃಹೋಪಯೋಗಿ ಎಲೆಕ್ಟ್ರಿಕ್ ವಸ್ತುಗಳಾದ ಸ್ವಿಚ್,
ವೈರ್ಗಳು, ಹೀಟರ್, ಕುಕ್ಕರ್, ಎಸಿ, ಆಟೋಮೆಟಿವ್ ವಾಹನಗಳು,
ಫೀಡಿಂಗ್ ಬಾಟಲ್, ಆಟಿಕೆಗಳು, ಫುಟ್ವೇರ್ ಇತ್ಯಾದಿ 344
ವಸ್ತುಗಳು ಬಿಎಸ್ಐ ಸರ್ಟಿಫಿಕೇಷನ್ಗೆ ಒಳಪಟ್ಟಿದ್ದು,
ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಎಲ್ಲ ಜನಬಳಕೆ
ವಸ್ತುಗಳು ಬಿಎಸ್ಐ ದೃಢೀಕರಣಕ್ಕೆ ಒಳಪಡಬೇಕೆಂದರು.
ಮಾರುಕಟ್ಟೆಯಲ್ಲಿ ಹಾಗೂ ಫುಟ್ಪಾತ್ಗಳಲ್ಲಿ ಅನೇಕ
ವಸ್ತುಗಳು ಯಾವುದೇ ಗುಣಮಟ್ಟದ ಮಾರ್ಕ್ ಆಗಲೀ,
ದೃಢೀಕರಣ ಇಲ್ಲದೇ ಮಾರಾಟವಾಗುತ್ತಿದ್ದು, ಈ ಬಗ್ಗೆಯೂ
ಜನರು ಗಮನ ಹರಿಸಬೇಕು ಎಂದರು.
ಜಿಲ್ಲೆಯ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳ
ಗುಣಮಟ್ಟವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಬೇಕು ಎಂದ
ಅವರು ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯವಾದ ಬೇಡಿಕೆಗಳ
ಬಗ್ಗೆ ಸಂಸದರಿಗೆ ಇತ್ತೀಚೆಗೆ ನೀವು ಮನವಿ ಸಲ್ಲಿಸಿದ್ದು
ಮುಂಬರುವ ಬಜೆಟ್ನಲ್ಲಿ ಜಿಲ್ಲೆಗೆ ವಿಶೇಷ ಅನುದಾನ ದೊರಕಲಿ
ಎಂದು ಆಶಿಸುತ್ತಾ, ಕೈಗಾರಿಕೋದ್ಯಮಿಗಳು ಈ
ಕಾರ್ಯಾಗಾರದ ಸದುಪಯೋಗ ಪಡೆದು ಜಿಲ್ಲೆಯ
ಅಭಿವೃದ್ದಿಗೆ ಕೈಜೋಡಿಸಬೇಕೆಂದರು.
ಬಿಐಎಸ್ ಹುಬ್ಬಳ್ಳಿ ಬ್ರಾಂಚ್ನ ನಿರ್ದೇಶಕರು ಮತ್ತು
ಮುಖ್ಯಸ್ಥರಾದ ಎಸ್.ಡಿ.ಸೆಲ್ವನ್ ಸ್ವಾಗತಿಸಿ ಮಾತನಾಡಿ, 1947 ರಲ್ಲಿ
ಐಎಸ್ಐ(ಇಂಡಿಯನ್ ಸ್ಟ್ಯಾಂಡಡ್ರ್ಸ್ ಇನ್ಸ್ಟಿಟ್ಯೂಷನ್) ಜಾರಿಗೆ ಬಂದಿದ್ದು,
ನಂತರ 1987 ರಲ್ಲಿ ಬಿಐಎಸ್ ಕಾಯ್ದೆ ಮೂಲಕ ಬಿಐಎಸ್ ಎಂಬುದಾಗಿ
ಇದು ಜಾರಿಗೆ ಬಂತು. ಇದೊಂದು ಶಾಸನಬದ್ದ ಅಂಗವಾಗಿದ್ದು
ಪ್ರಮಾಣೀಕರಣ, ಗುಣಮಟ್ಟ ಮತ್ತು ದೃಢೀಕರಣ
ಚಟುವಟಿಕೆಗಳ ಸಾಮರಸ್ಯ ಬೆಳವಣಿಗೆಗೆ ಸಹಕರಿಸುತ್ತಿದೆ
ಎಂದರು.
ಉತ್ಪಾದಕರು ಬಿಐಎಸ್ ಪ್ರಮಾಣಿಕರಣ ಇಲ್ಲದೇ
ಉತ್ಪನ್ನಗಳನ್ನು ಉತ್ಪಾದಿಸುವುದು, ಸಂಗ್ರ್ರಹಿಸುವುದು,
ಸಾಗಿಸುವುದು, ಮಾರಾಟ ಸೇರಿದಂತೆ ಇತರೆ ಚಟುವಟಿಕೆ
ಕೈಗೊಳ್ಳುವುದು ಅಪರಾಧವಾಗಿದ್ದು
ಕೈಗಾರಿಕೋದ್ಯಮಿಗಳು ಪರವಾನಗಿ ಪಡೆಯಲು ಬಿಐಎಸ್ ನ್ನು
ಸಂಪರ್ಕಿಸಬೇಕು. ರಾಜ್ಯದಲ್ಲಿ ಬೆಂಗಳೂರು ಮತ್ತು
ಹುಬ್ಬಳ್ಳಿಯಲ್ಲಿ ಎರಡು ಕಡೆ ಬಿಐಎಸ್ ಬ್ರಾಂಚ್ ಕಚೇರಿಗಳಿವೆ.
ಹುಬ್ಬಳ್ಳಿ ಕಚೇರಿ 16 ಜಿಲ್ಲೆಗಳಿಗೆ ಸಂಬಂಧಿಸಿದಂತೆ
ವ್ಯವಹರಿಸುತ್ತಿದೆ.
ಬಿಐಎಸ್ ಕೈಗಾರಿಕೆಗಳ ಸ್ನೇಹಿಯಾಗಿದ್ದು, ಪರವಾನಗಿ
ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲಾಗಿದೆ.
ಹಾಗೂ ಎಂಎಸ್ಎಂಇ ಗಳಿಗೆ ಶೇ.20 ರಿಯಾಯಿತಿ ನೀಡಲಾಗಿದೆ. ಅರ್ಜಿ
ಸಲ್ಲಿಸಿದ 30 ದಿನಗಳ ಒಳಗೆ ಪರವಾನಗಿ ಮಂಜೂರು ಮಾಡಲು
ಕ್ರಮ ವಹಿಸಲಾಗುವುದು. ಬಿಐಎಸ್ 3ನೇ ಪಾರ್ಟಿ
ಗ್ಯಾರಂಟಿಯನ್ನು ಖಾತ್ರಿಪಡಿಸುತ್ತದೆ. 2 ಗ್ರಾಂ ಮೇಲ್ಪಟ್ಟ
ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯವಾಗಿದೆ. ಬಿಐಎಸ್ ಪರವಾನಗಿಗೆ
ಸಂಬಂಧಿಸಿದಂತೆ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿ ಇದೆ. ಹಾಗೂ
ಮೊಬೈಲ್ ಆ್ಯಪ್ ಮೂಲಕ ಸಹ ಮಾಹಿತಿ ಪಡೆಯಬಹುದು
ಎಂದರು.
ಬಿಐಎಸ್ ಹುಬ್ಬಳ್ಳಿ ಬ್ರಾಂಚ್ನ ಸೈಂಟಿಸ್ಟ್ ಸಿ ಅಭಿಷೇಕ್ ನಾಯ್ಡು,
ಬಿಐಎಸ್ ಸರ್ಟಿಫಿಕೇಷನ್ ಪಡೆಯುವ ವಿಧಾನವನ್ನು ಪಿಪಿಟಿ ಮೂಲಕ
ಪ್ರದರ್ಶಿಸುತ್ತಾ, ಸಾರ್ವಜನಿಕ ಸುರಕ್ಷತೆ ಹಿನ್ನೆಲೆಯಲ್ಲಿ
ಯಾವುದೇ ಜನಬಳಕೆ ವಸ್ತುವಿಗೆ ಬಿಐಎಸ್ ದೃಢೀಕರಣ
ಕಡ್ಡಾಯವಾಗಿದೆ. ಬಿಐಎಸ್ ವಸ್ತುಗಳ ಮಾನದಂಡಗಳನ್ನು
ಸೂತ್ರೀಕರಣ ಮಾಡುವ, ಲ್ಯಾಬ್ಗಳಲ್ಲಿ ಸ್ಯಾಂಪಲ್ ಪರೀಕ್ಷೆ
ಮಾಡುವ, ದೃಢೀಕರಣ ನೀಡುವ ಮತ್ತು ಹಾಲ್ಮಾರ್ಕ್
ನೀಡುವ ಕೆಲಸ ಮಾಡುತ್ತದೆ. ಜೊತೆಗೆ ಬಿಐಎಸ್ನ
ಉದ್ಯೋಗಿಗಳಿಗೆ ಈ ಬಗ್ಗೆ ತರಬೇತಿ ನೀಡುತ್ತದೆ. ಆಮದು
ಸುರಕ್ಷತೆ ಹಿನ್ನೆಲೆಯಲ್ಲಿ ಆಮದು ಕಂಪೆನಿಗಳು ಬಿಐಎಸ್ನಲ್ಲಿ
ನೋಂದಣಿ ಮಾಡಿಸುವುದು ಸಹ ಕಡ್ಡಾಯವಾಗಿದೆ ಎಂದ
ಅವರು ಬಿಐಎಸ್ ಪರವಾನಗಿ, ನೋಂದಣಿ ಅಥವಾ ಯಾವುದೇ
ಮಾಹಿತಿಗೆ ತಿತಿತಿ.mಚಿಟಿಚಿಞoಟಿಟiಟಿe.iಟಿ ಗೆ ಭೇಟಿ ನೀಡಿ ಮಾಹಿತಿ
ಪಡೆಯಬಹುದು ಎಂದರು.
ಸ್ಟಾರ್ ಆಕ್ವಾ ವಾಟರ್ ಪ್ಲಾಂಟ್ನ ಮಾಲೀಕ ಟಿ.ಎಸ್.ರಾಮಯ್ಯ ಈ
ವೇಳೆ ಮಾತನಾಡಿ, ಐಎಸ್ಐ ದೃಢೀಕರಣ ಪಡೆಯದೇ ಇರುವ
ವಾಟರ್ ಪ್ಲಾಂಟ್ಗಳು ಸಭೆ, ಸಮಾರಂಭಗಳಿಗೆ ಅತಿ ಕಡಿಮೆ
ದರದಲ್ಲಿ ಪ್ಯಾಕೇಜ್ಡ್ ನೀರನ್ನು ಪೂರೈಸುತ್ತಿದ್ದು, ಇದರಿಂದ
ಐಎಸ್ಐ ದೃಢೀಕರಣ ಹೊಂದಿರುವ ವಾಟರ್ ಪ್ಲಾಂಟ್ನವರಿಗೆ ಅತ್ಯಂತ
ಕಠಿಣ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ
ಅಧಿಕೃತ ಮಾರಾಟಗಾರರಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾ
ಮಿನರಲ್ ವಾಟರ್ ಪ್ಲಾಂಟ್ಗಳ ಸಂಘದ ವತಿಯಿಂದ ಮನವಿ
ಮಾಡುತ್ತೇನೆ ಎಂದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ
ಜಯಪ್ರಕಾಶ ನಾರಾಯಣ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್,
ಕೈಗಾರಿಕೋದ್ಯಮಿಗಳಾದ ಮೆ|| ನಾರದಮುನಿ ಟೆಕ್ಸ್ಟೈಲ್ಸ್ನ
ವೃಷಭೇಂದ್ರಪ್ಪ,
ಶ್ರೀ ಮಾರ್ಕಂಡಯ್ಯ ಇಂಜಿನಿಯರ್ ವಕ್ರ್ಸ್ ರೆಸಿಡೆನ್ಸಿಯ
ಗೋಪಾಲಕೃಷ್ಣ ಆರ್, ಗ್ರೀನ್ ಆಗ್ರೋ ಪ್ಯಾಕ್ ಪ್ರೈ.ಲಿ.ನ
ಸಂತೋಷ್ ಹೆಚ್.ಆರ್ ಮತ್ತು ಪ್ರವೀಣಾ ಬಿ.ಎಂ, ಶ್ರೀ
ಮಾರ್ಕಂಡಯ್ಯ ಮತ್ತು ಎಲೆಕ್ಟ್ರಿಕಲ್ ಹರಿಹರದ
ಪಿ.ಎಲ್.ರುದ್ರಪ್ಪ, 2 ಕೆ ಗಾರ್ಮೆಂಟ್ಸ್ನ ಡಿ.ಶೇಷಾಚಲ, ದುರ್ಗಾಂಬಿಕ
ಅಪ್ಲೈಯನ್ಸ್ಸ್ನ ಪ್ರೀತೇಶ್ ಕುಮಾರ್, ಜೆ.ಎಸ್.ಒ
ಕಮ್ಯುಟೆಂಟ್ನ ಬಿ.ವೆಂಕಟ್ಸ್ವಾಮಿ, ಗಗನ್ ಆಕ್ವಾ ಇಂಡಸ್ಟ್ರೀಸ್ನ
ಗಗನ್ದೀಪ್ ಎ.ಪಿ, ನಾಯ್ಕ್ ಇಂಡಸ್ಟ್ರೀಸ್ನ ಮೋತ್ಯಾ ನಾಯ್ಕ್,
ನಾರದೇಶ್ವರ ಇಂಜಿನಿಯರ್ಸ್ನ ಜಗದೀಶ್, ಆರಾಧ್ಯ ಸ್ಟೀಲ್
ಪ್ರೈ.ಲಿ.ನ ಗೋಪಿ ಎಂ ಹಾಗೂ ಇನ್ನಿತರೆ
ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.